×
Ad

ಇದು ಮೋದಿ ಅಲೆ, ದಿಲ್ಲಿ ಮುಖ್ಯಮಂತ್ರಿಯನ್ನು ಮತದಾರರು ತಿರಸ್ಕರಿಸಿದ್ದಾರೆ: ಯೋಗೇಂದ್ರಯಾದವ್

Update: 2017-04-26 12:40 IST

 ಹೊಸದಿಲ್ಲಿ,ಎ. 27: ದಿಲ್ಲಿನಗರ ನಿಗಮ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯ ನಡುವೆಯೇ ಪ್ರತಿಕ್ರಯಿಸಿದ ಕೇಜ್ರಿವಾಲ್‌ರ ಮಾಜಿ ದೋಸ್ತಿ, ಹಾಗೂ ಸ್ವರಾಜ್ ಇಂಡಿಯಾ ಸಂಸ್ಥಾಪಕ ಯೋಗೇಂದ್ರ ಯಾದವ್‌ರು "ದಿಲ್ಲಿ ಸ್ಪಷ್ಟ ರೂಪದಲ್ಲಿ ಬಿಜೆಪಿಗೆ ತನ್ನ ಆದ್ಯತೆಯನ್ನು ಪ್ರಕಟಿಸಿದೆ" ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಗೆಲುವಿನತ್ತ ಸಾಗುತ್ತಿದೆ. ಇದು ಅರವಿಂದ್ ಕೇಜ್ರಿವಾಲ್‌ರ ಸರಕಾರದ ವಿರುದ್ಧ ಜನರ ಆಕ್ರೋಶವಾಗಿದೆ ಎಂದು ಯೋಗೇಂದ್ರ ಯಾದವ್ ಕೇಜ್ರಿವಾಲ್‌ರನ್ನು ಕೆಣಕಿದ್ದಾರೆ. ಎರಡುವರ್ಷಗಳ ಹಿಂದೆ ಕೇಜ್ರಿವಾಲ್‌ಮತ್ತು ಯಾದವ್ ಒಟ್ಟಿಗೆ ಆಮ್‌ಆದ್ಮಿಪಾರ್ಟಿಯಲ್ಲೇ ಇದ್ದರು. ನಂತರ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಕೇಜ್ರಿವಾಲ್‌ರೊಂದಿಗೆ ಮುನಿಸಿಕೊಂಡು ಆಮ್ ಆದ್ಮಿ ಪಾರ್ಟಿಯಿಂದ ಹೊರಬಂದು ಸ್ವರಾಜ್ ಇಂಡಿಯಾ ಪಾರ್ಟಿಯನ್ನು ಕಟ್ಟಿದ್ದಾರೆ.

 ಟಿವಿಚಾನೆಲ್ ವೊಂದರ ಜೊತೆ ಮಾತಾಡಿದ ಯೋಗೇಂದ್ರ ಯಾದವ್ ನಿಗಮ ಚುನಾವಣೆಯಲ್ಲಿ ಮೋದಿ ಜಾದೂ ಮುಂದುವರಿದಿದೆ. ಎಮ್‌ಸಿಡಿ ಚುನಾವಣೆಯಲ್ಲಿ ಜನರು ಮುಖ್ಯಮಂತ್ರಿಯನ್ನು ತಳ್ಳಿಹಾಕಿದ್ದಾರೆ. ಬದಲಾಗಿ ಪ್ರಧಾನಿ ಮೋದಿಯನ್ನುಆಯ್ಕೆ ಮಾಡಿಕೊಂಡಿದ್ದಾರೆ. ಜೊತೆ ತಮ್ಮ ಸ್ವರಾಜ್ ಇಂಡಿಯಾ

ಚುನಾವಣೆಯಲ್ಲಿ ದೊಡ್ಡ ಭರವಸೆಯನ್ನು ಇರಿಸಿರಲಿಲ್ಲ. ಕೇವಲ ನಮ್ಮ ಆರಂಭ ಮಾತ್ರ ಇದಾಗಿತ್ತು ಎಂದು ಅಭಿಪ್ರಾಯ ಪ್ರಕಟಿಸಿದರು.

ಇದೇ ವೇಳೆ ಮತ ಎಣಿಕೆಗಿಂತ ಮೊದಲು ಮತ್ತೊಮ್ಮೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇವಿಎಮ್(ಮತಯಂತ್ರ) ಕುರಿತು ಸಂದೇಹ ಪ್ರಕಟಿಸಿದ್ದಾರೆ. ಮತಯಂತ್ರ ಮೋಸದ ವಿಷಯವನ್ನು ಪಂಜಾಬ್ ವಿಧಾನಸಭಾ ಚುನಾವಣೆಯ ನಂತರ ಅವರು ಎತ್ತತೊಡಗಿದ್ದಾರೆ. ಕೇಜ್ರಿವಾಲ್ ದಿಲ್ಲಿನಗರ ನಿಗಮ ಚುನಾವಣೆಯನ್ನು ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News