ತ್ರಿವಳಿ ತಲಾಖ್‌ನ್ನು ರಾಜಕೀಯ ದೃಷ್ಟಿಯಿಂದ ನೋಡಬೇಡಿ : ಮುಸ್ಲಿಮರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ
Update: 2017-04-29 17:29 IST
ಹೊಸದಿಲ್ಲಿ,ಎ.29: ಮುಸ್ಲಿಂ ಸಮುದಾಯವು ತ್ರಿವಳಿ ತಲಾಖ್ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಹೇಳಿದರು.
ಮುಂದಕ್ಕೆ ಬರುವಂತೆ ಮತ್ತು ಈ ವಿವಾದಾತ್ಮಕ ವಿಷಯಕ್ಕೆ ಪರಿಹಾರವೊಂದನ್ನು ಕಂಡುಕೊಳ್ಳುವಂತೆ ಮುಸ್ಲಿಂ ಸಮುದಾಯವನ್ನು ಆಗ್ರಹಿಸಿದ ಅವರು, ಕೇಂದ್ರ ಸರಕಾರವು ಈ ‘ಪ್ರಾಚೀನ ಕಾನೂನಿಗೆ ’ ಅಂತ್ಯ ಕಾಣಿಸಲಿದೆ ಎಂದು ಭರವಸೆ ನೀಡಿದರು.
ತ್ರಿವಳಿ ತಲಾಖ್‌ನ ದುಷ್ಪರಿಣಾಮಗಳಿಂದ ಮಹಿಳೆಯರನ್ನು ರಕ್ಷಿಸಲು ಸಮುದಾಯ ದಿಂದಲೇ ಸುಧಾರಕರು ಮುಂದೆ ಬರುತ್ತಾರೆ ಎಂಂದು ಬಿಜೆಪಿಯ ಕಾರ್ಯ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.
ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರೆಯಬೇಕು. ಅವರಿಗೆ ಅನ್ಯಾಯವಾಗಕೂಡದು. ಯಾರನ್ನೂ ಶೋಷಣೆ ಮಾಡಬಾರದು ಎಂದರು.