ಒಂದು ಟ್ರಕ್ ಕಲ್ಲುಗಳೊಂದಿಗೆ ಸನ್ಯಾಸಿಗಳು ಕಾಶ್ಮೀರಕ್ಕೆ !

Update: 2017-05-04 10:56 GMT

ಕಾನ್ಪುರ,ಮೇ 4: ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಸೈನ್ಯದ ವಿರುದ್ಧ ಕಲ್ಲೆಸೆತ ಮುಂದುವರಿಸಿದ ಪರಿಸ್ಥಿತಿಯಲ್ಲಿ ಸೈನಿಕರ ಆತ್ಮವಿಶ್ವಾಶ ಹೆಚ್ಚಿಸಲಿಕ್ಕಾಗಿಒಂದು ಟ್ರಕ್ ಕಲ್ಲುಗಳೊಂದಿಗೆ ಒಂದು ಸಾವಿರ ಸನ್ಯಾಸಿಗಳು ಕಾಶ್ಮೀರಕ್ಕೆ ತೆರಳಲಿದ್ದಾರೆ. ಕಾನ್ಪುರದ ಜನ್‌ಸೇನಾ ಎನ್ನುವ ಧಾರ್ಮಿಕ ಸಂಘಟನೆಯ ಸಾವಿರ ಮಂದಿ ಕಲ್ಲುಗಳೊಂದಿಗೆ ಕಾಶ್ಮೀರಕ್ಕೆ ಪ್ರಯಾಣಿಸಲಿದ್ದಾರೆ.

ಜನ್‌ಸೇನಾ ಸ್ಥಾಪಕ ಬಾಲಯೋಗಿ ಅರುಣ್ ಪುರಿ ಚೈತನ್ಯ ಮಹಾರಾಜ್ " ಮುಂದಿನ ರವಿವಾರ ಸನ್ಯಾಸಿಗಳು ಕಾಶ್ಮೀರಕ್ಕೆ ಹೊರಡಲಿದ್ದಾರೆ ಎಂದು ತಿಳಿಸಿದರು. ಟ್ರಕ್‌ನಲ್ಲಿ ಕಲ್ಲು ಹೋದರೆ, ಸನ್ಯಾಸಿಗಳು ನೂರು ಕಾರುಗಳು ಮತ್ತು ಮೂರು ಬಸ್‌ಗಳಲ್ಲಿ ಪ್ರಯಾಣಿಸಲಿದ್ದಾರೆ.

  ಸೈನಿಕರ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ನಾವು ಕಲ್ಲುಗಳೊಂದಿಗೆ ಹೋಗುತ್ತಿದ್ದೇವೆ. ಇದಕ್ಕೆ ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರಮೋದಿಯವರಲ್ಲಿ ಅನುಮತಿಕೇಳಿದ್ದೇವೆ. ಇದಕ್ಕೆ ಅನುಮತಿಸಿಕ್ಕಿಲ್ಲ ಎಂದು ಜನ್‌ಸೇನಾ ಸಂಸ್ಥಾಪಕ ಚೈತನ್ಯ ಮಹಾರಾಜ್ ಹೇಳಿದ್ದಾರೆ. ಜಿಲ್ಲಾಡಳಿತವೂ ಅನುಮತಿ ನಿರಾಕರಿಸಿದೆ.

  ಇಬ್ಬರು ಸೈನಿಕರನ್ನು ಪಾಕಿಸ್ತಾನ ಹತ್ಯೆ ಮಾಡಿದ ಕೃಷ್ಣಗಿರಿಗೆ ಜನ್‌ಸೇನಾ 500 ಸ್ವಯಂಸೇವಕರನ್ನು ಕಳುಹಿಸಿಕೊಡಲಿದೆ. ಇವರನ್ನು ಗಡಿಯಲ್ಲಿಸೈನಿಕರ ಮುಂಭಾಗದಲ್ಲಿ ನಿಲ್ಲಿಸಬೇಕೆಂದು ಸೈನ್ಯವನ್ನು ಆಗ್ರಹಿಸಲಾಗುವುದು ಎಂದು ಚೈತನ್ಯ ತಿಳಿಸಿದ್ದಾರೆ. ಸೈನಿಕರಿಗಾಗಿ ಪ್ರಾಣ ಬಿಡಲು ನಮಗೆ ಹೆಮ್ಮೆ ಇದೆ. ನಮಗೆ ಕುಟುಂಬ ಇಲ್ಲದ್ದರಿಂದ ನಮ್ಮನ್ನು ಸ್ಮರಿಸಿಕೊಂಡು ಅಳಲು ಯಾರೂ ಇಲ್ಲ ಎಂದು ಚೈತನ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News