ಜನಪದ ಕಲೆಗಳನ್ನು ಉಳಿಸಿ

Update: 2017-05-10 18:28 GMT

ಮಾನ್ಯರೆ,

ಭಾರತೀಯ ಜನಪದ ಕಲೆಗಳು ದೇಶದ ವಿವಿಧ ಭಾಷೆ, ಧರ್ಮ, ಜನಾಂಗ, ಆಹಾರ, ವೇಷಭೂಷಣ, ಸಂಸ್ಕೃತಿ ಹಾಗೂ ಸಮಾಜದ ಸಾಮಾಜಿಕ ಆಚರಣೆಗಳೊಂದಿಗೆ ಬೆಸೆದುಕೊಂಡಿದ್ದು, ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನತೆ ಹೊಂದಿದೆ. ಹಾಗಾಗಿಯೇ ನಮ್ಮ ದೇಶದ ಜಾನಪದ ಕಲೆಗಳು ಅತ್ಯಂತ ಶ್ರೀಮಂತವಾಗಿರುವುದರ ಜೊತೆಗೆ ಸಮಾಜದಲ್ಲಿ ಐಕ್ಯತೆಯನ್ನೂ ಬೆಸೆಯುತ್ತವೆ.
ಇತಿಹಾಸದ ಪರಂಪರೆಯನ್ನು ಪ್ರತಿನಿಧಿಸಿ ಸಮುದಾಯಗಳ ಸಹಬಾಳ್ವೆಗೆ ಸಹಕಾರಿಯಾಗಿರುವ ಜಾನಪದ ಕಲೆಗಳು ಸೂಕ್ತ ಪ್ರೋತ್ಸಾಹ ಸಿಗದೆ ಅವನತಿಯತ್ತ ಸಾಗುತ್ತಿರುವುದು ವಿಷಾದನೀಯ ಸಂಗತಿ.
ಭಾರತದಲ್ಲಿ 30 ಸಾವಿರಕ್ಕಿಂತ ಅಧಿಕ ಜಾನಪದ ಕಲೆಗಳಿದ್ದು ಕಲಾವಿದರಲ್ಲಿ ಸಂಘಟನೆಯ ಕೊರತೆಯಿಂದ ಅಪರೂಪದ ಜಾನಪದ ಕಲೆಗಳು ಅವನತಿಯಂಚಿಗೆ ತಲುಪುತ್ತಿದೆ.
ಆದ್ದರಿಂದ ಸರಕಾರ ಜಾನಪದ ಕಲೆಯ ಉಳಿವಿಗಾಗಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡು, ಜನಪದ ಕಲಾವಿದರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸಬೇಕು. ಜೊತೆಗೆ ಮುಂದಿನ ಜನಾಂಗಕ್ಕೆ ಜಾನಪದ ಕಲೆಗಳ ಬಗ್ಗೆ ತಿಳಿದುಕೊಳ್ಳಲು ಶಾಲಾ ಕಾಲೇಜುಗಳ ಪಠ್ಯಪುಸ್ತಕದಲ್ಲಿ ಜಾನಪದ ಕಲೆಗಳ ಅಧ್ಯಾಯಗಳನ್ನು ಅಳವಡಿಸಬೇಕು. ಈ ಮೂಲಕ ನಮ್ಮ ಶ್ರೀಮಂತ ಜಾನಪದ ಕಲೆಯ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ.

Writer - ಮೌಲಾಲಿ ಕೆ.ಬೋರಗಿ, ಸಿಂದಗಿ

contributor

Editor - ಮೌಲಾಲಿ ಕೆ.ಬೋರಗಿ, ಸಿಂದಗಿ

contributor

Similar News