‘ಪಾಡ್ ಟ್ಯಾಕ್ಸಿ’ ಶೀಘ್ರ ಬರಲಿ

Update: 2017-05-12 18:29 GMT

ಮಾನ್ಯರೆ,

ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಿಸಿದರೂ ಇನ್ನೂ ಟ್ರಾಫಿಕ್ ಜಾಮ್ ಕಡಿಮೆಯಾಗಿಲ್ಲ. ಹೀಗಾಗಿ ಶೀಘ್ರವೇ ಬಿಬಿಎಂಪಿ ‘ಪಾಡ್ ಟ್ಯಾಕ್ಸಿ’ ಅರ್ಥಾತ್ ‘ಮೆಟ್ರಿನೋ’ ಯೋಜನೆಯನ್ನು ಆರಂಭಿಸುವುದರ ಕುರಿತು ಬಿಬಿಎಂಪಿ ಚಿಂತನೆ ನಡೆಸಿದೆ. ವಿದ್ಯುತ್‌ನಿಂದ, ಚಾಲಕನಿಲ್ಲದೆ ಸ್ವಯಂಚಾಲಿತವಾಗಿ ಚಲಿಸುವ ಈ ವಾಹನಗಳ ಅಗತ್ಯತೆ ಜರೂರಾಗಿದೆ. ನೆಲ ಬಿಟ್ಟು ಸಂಚರಿಸುವ ಈ ವಾಹನದಲ್ಲಿ ಆರು ಮಂದಿ ಪ್ರಯಾಣಿಸಬಹುದು. ದಿಲ್ಲಿ-ಹರ್ಯಾಣದಲ್ಲಿ ಈ ಪಾಡ್ ಟ್ಯಾಕ್ಸಿ ಯೋಜನೆಗಾಗಿ 800 ಕೋಟಿ ರೂ. ವೆಚ್ಚ ಮಾಡಲಾಗಿದೆ. ಹೊಸ ಯೋಜನೆಯನ್ನು ಆರಂಭಿಸುವಾಗ ನಮ್ಮ ರಾಜ್ಯದಲ್ಲಿ ‘ಅವ್ಯವಹಾರ’ ದ ಸುದ್ದಿ ಸಾಮಾನ್ಯವಾಗಿದ್ದು, ಈ ಯೋಜನೆಯಲ್ಲಿ ಇದಕ್ಕೆ ಕಡಿವಾಣ ಬೀಳಬೇಕು. ಮನಸ್ಸು ಮಾಡಿದರೆ ಒಂದು ವರ್ಷದೊಳಗೆ ಪೂರ್ಣಗೊಳಿಸಬಹುದಾದ ಈ ಯೋಜನೆಗೆ ಅರಣ್ಯ, ಪರಿಸರ ಇಲಾಖೆಯ ಅಂಗೀಕಾರ ಕೂಡಾ ಬೇಕಾಗಿಲ್ಲ. ಟ್ರಾಫಿಕ್ ಜಾಮ್ ನಿವಾರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಕೂಡಲೇ ಈ ಯೋಜನೆಯ ಆರಂಭಕ್ಕೆ ಸಿದ್ಧತೆ ನಡೆಸಬೇಕಾಗಿದೆ.

Similar News