×
Ad

ಚಾಂಪಿಯನ್ಸ್ ಟ್ರೋಫಿಗೆ ಸ್ಟೋನಿಸ್ ಫಿಟ್

Update: 2017-05-17 23:41 IST

ಮೆಲ್ಬೋರ್ನ್, ಮೇ 17: ಆಸ್ಟ್ರೇಲಿಯದ ಆಲ್‌ರೌಂಡರ್ ಮಾರ್ಕಸ್ ಸ್ಟೋನಿಸ್ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಜೂ.1 ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಫಿಟ್ ಆಗಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ವಿರುದ್ಧ ಮೇ 5 ರಂದು ನಡೆದಿದ್ದ ಪಂದ್ಯದ ಮುನ್ನಾದಿನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಟೋನಿಸ್ ಭುಜಕ್ಕೆ ನೋವಾಗಿತ್ತು. ಐಪಿಎಲ್‌ನ್ನು ಅರ್ಧದಲ್ಲೇ ತೊರೆದಿದ್ದ ಸ್ಟೋನಿಸ್ ಆಸ್ಟ್ರೇಲಿಯಕ್ಕೆ ವಾಪಸಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ತನ್ನ ಫಿಟ್‌ನೆಸ್‌ನ್ನು ಸಾಬೀತುಪಡಿಸಿದ್ದಾರೆ.

27ರಹರೆಯದ ಸ್ಟೋನಿಸ್ ಬುಧವಾರ ಬ್ರಿಸ್ಬೇನ್‌ನಲ್ಲಿ ನ್ಯಾಶನಲ್ ಕ್ರಿಕೆಟ್ ಸೆಂಟರ್‌ನಲ್ಲಿ ಬೌಲಿಂಗ್ ಮಾಡಿದರು. ತಂಡದ ಸಹಾಯಕ ಸಿಬ್ಬಂದಿಯು ಸ್ಟೋನಿಸ್‌ರನ್ನು ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್ ಮಾಡಿದ್ದಾರೆ. ಸ್ಟೋನಿಸ್ ಗುರುವಾರ ರಾತ್ರಿ ಸಹ ಆಟಗಾರರೊಂದಿಗೆ ಬ್ರಿಸ್ಬೇನ್‌ನಿಂದ ಲಂಡನ್‌ಗೆ ಪ್ರಯಾಣಿಸಲಿದ್ದಾರೆ.

ಆಸ್ಟ್ರೇಲಿಯ ಮೇ 26 ರಂದು ಲಂಡನ್‌ನಲ್ಲಿ ಶ್ರೀಲಂಕಾ ವಿರುದ್ಧ ಚಾಂಪಿಯನ್ಸ್ ಟ್ರೋಫಿಗಾಗಿ ಅಭ್ಯಾಸ ಪಂದ್ಯವನ್ನು ಆಡಲಿದೆ. ಮೇ 29 ರಂದು ಪಾಕ್ ವಿರುದ್ಧ ಎರಡನೆ ಅಭ್ಯಾಸ ಪಂದ್ಯವನ್ನು ಆಡುವುದು.

ಆಸ್ಟ್ರೇಲಿಯ ತಂಡ: ಸ್ಟೀವನ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಆ್ಯರೊನ್ ಫಿಂಚ್, ಜಾನ್ ಹೇಸ್ಟಿಂಗ್ಸ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಮೊಸೆಸ್ ಹೆನ್ರಿಕ್ಸ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೇಮ್ಸ್ ಪ್ಯಾಟಿನ್ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂಸ್ ವೇಡ್ ಹಾಗೂ ಆಡಮ್ ಝಾಂಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News