×
Ad

ಕೇರಳದಲ್ಲಿ ಎಚ್ 1 ಎನ್ 1ಗೆ 40 ಮಂದಿ ಬಲಿ

Update: 2017-05-22 19:57 IST

ಕೇರಳ, ಮೇ 22: ಎಚ್ 1 ಎನ್ 1 ಸೋಂಕಿಗೆ ತುತ್ತಾಗಿ ಕಳೆದ ನಾಲ್ಕು ತಿಂಗಳುಗಳಲ್ಲಿ 40 ಮಂದಿ ಮೃತಪಟ್ಟಿರುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ.

ಈ ವರ್ಷದ ಆರಂಭದಿಂದ ಸುಮಾರು 2,349 ಮಂದಿಯನ್ನು ಎಚ್ 1 ಎನ್ 1 ತಪಾಸಣೆಗೊಳಪಡಿಸಲಾಗಿದ್ದು, ಇವರಲ್ಲಿ 500 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 40 ಮಂದಿ ಮೃತಪಟ್ಟಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.

ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಸರಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಎಚ್ 1 ಎನ್ 1 ನಿಂದ ಮೃತಪಟ್ಟವರು ಬೇರೆ ರೋಗಗಳಿಂದಲೂ ಬಳಲುತ್ತಿದ್ದರು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News