ಆರ್ ಜೆಡಿ ನಾಯಕ ಪ್ರಭುನಾಥ್‌ ಸಿಂಗ್‌ಗೆ ಜೀವಾವಧಿ ಸಜೆ

Update: 2017-05-23 09:05 GMT

ಝಾರ್ಕಂಡ್‌, ಮೇ 23: ಇಪ್ಪತ್ತೆರಡು ವರ್ಷಗಳ ಹಿಂದೆ ಶಾಸಕರೊಬ್ಬರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಬಿಹಾರದ ಮಹಾರಾಜ್‌ಗಂಜ್‌ ಕ್ಷೇತ್ರದಿಂದ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಮಾಜಿ ಸಂಸದ ಹಾಗೂ ಆರ್ ಜೆಡಿ  ನಾಯಕ ಪ್ರಭುನಾಥ್ ಸಿಂಗ್‌ ಅವರಿಗೆ ಝಾರ್ಖಂಡ್‌ನ ಹಝರಿಬಾಗ್‌ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಎಂಎಲ್‌ಎ ಅಶೋಕ್‌ ಸಿಂಗ್‌ ಅವರ ಹತ್ಯಾ ಪ್ರಕರಣದಲ್ಲಿ ಪ್ರಭುನಾಥ್‌ ಸಿಂಗ್‌, ಅವರ ಸಹೋದರರಾದ ದೀನನಾಥ್ ಸಿಂಗ್ ಮತ್ತು ರಿತೀಶ್‌ ಸಿಂಗ್‌ ಅವರನ್ನು ಮೇ 18ರಂದು ನ್ಯಾಯಾಲಯವು ದೋಷಿಗಳೆಂದು ತೀರ್ಪು ನೀಡಿ ನ್ಯಾಯಾಂಗ ಬಂಧನಕ್ಕೊಳಪಡಿಸಿತ್ತು.
ಉತ್ತರ ಬಿಹಾರದ ಸರಣ್‌ ಜಿಲ್ಲೆಯ ಮಾಸ್ರಾಕ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಅಶೋಕ್‌ ಸಿಂಗ್‌ ಅವರನ್ನು ಪಾಟ್ನಾದ ತನ್ನ ಅಧಿಕೃತ ನಿವಾಸದಲ್ಲಿ 1995, ಜುಲೈ 3ರಂದು ಹತ್ಯೆಗೈಯಲಾಗಿತ್ತು. 
ಈ ಸಂಬಂಧ ಸಚಿವಾಲಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಭುನಾಥ್‌ ಸಿಂಗ್‌, ಕೆದಾರ‍್ ಸಿಂಗ್, ರಿತೇಶ್ ಸಿಂಗ್‌ ಮತ್ತು ಸುಧೀರ್‌ ಸಿಂಗ್ ಆರೋಪಿಗಳೆಂದು  ತನಿಖೆ ವೇಳೆ  ಸಾಬೀತಾಗಿತ್ತು.
1991, ಡಿ.28ರಂದು ಆರೋಪಿಗಳು ಅಶೋಕ್‌ ಸಿಂಗ್‌ ವೇಳೆ ದಾಳಿ ಮಾಡಿದ್ದರು.ಈ ಪ್ರಕರಣದಲ್ಲಿ ನಾಲ್ವರ ವಿರುದ್ಧ ಕೇಸು ದಾಖಲಾಗಿತ್ತು. 1997ರಲ್ಲಿ ಆರೋಪಿಗಳು ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಪ್ರಭಾವ ಬೀರುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಈ ಪ್ರಕರಣದ ವಿಚಾರಣೆಯನ್ನು ಪಾಟ್ನಾದಿಂದ ಹಝಾರಿಬಾಗ್‌ ಗೆ ವರ್ಗಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News