ಚಲಿಸುತ್ತಿರುವ ರೈಲಿನಲ್ಲಿ ಬಾಲಕಿಯ ಅತ್ಯಾಚಾರ ಯತ್ನ

Update: 2017-05-23 09:24 GMT

ಕಣ್ಣೂರ್, ಮೇ 23: ರೈಲಿನ ಪ್ರಯಾಣದ ವೇಳೆ ಹದಿಮೂರು ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

 ಮಲಪ್ಪುರಂ ರಂಡತ್ತಾಣಿ ಕಡಿಯಾಪ್ಪುರ ಹೌಸ್ ಶಂಸುದ್ದೀನ್ (43) ನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಸುಮಾರು 12.05ಕ್ಕೆ ಎರ್ನಾಕುಲಂ-ಅಜ್ಮೀರ್ ಮರುಸಾಗರ್ ಎಕ್ಸ್‌ಪ್ರೆಸ್ ನಲ್ಲಿ ಆರೋಪಿ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದನು. ಮಂಗಳೂರಿನ ವಿದ್ಯಾರ್ಥಿನಿ ಇತರ ಮಕ್ಕಳೊಂದಿಗೆ ಪ್ರವಾಸ ಹೋಗಿ ಮರಳುತ್ತಿದ್ದವೇಳೆ ಈತ ದುಷ್ಕೃತ್ಯಕ್ಕೆ ಯತ್ನಿಸಿದ್ದಾನೆ. ಬಾಲಕಿ ಬೊಬ್ಬೆಹೊಡೆದಿದ್ದು, ಸಹಪ್ರಯಾಣಿಕರು ಆರೋಪಿ ಶಂಸುದ್ದೀನ್‌ನನ್ನು ಹಿಡಿದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News