×
Ad

ತಮಿಳ್ನಾಡಿನಲ್ಲಿ ಬಿಜೆಪಿ ದುರ್ಬಲವಾಗಿದೆ,ನೀವು ಬಂದು ಬಲಪಡಿಸಿ: ರಜನೀಕಾಂತ್‌ರಿಗೆ ಮತ್ತೆ ಅಮಿತ್‌ಶಾ ಆಹ್ವಾನ

Update: 2017-05-24 18:09 IST

ಹೊಸದಿಲಿ,ಮೇ 24: ರಾಜಕೀಯ ಪ್ರವೇಶಿಸುವ ಬಲವಾದ ಸೂಚನೆ ನೀಡಿರುವ ರಜನೀಕಾಂತ್‌ರನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದಾರೆ. ಎಲ್ಲ ಒಳ್ಳೆಯ ವ್ಯಕ್ತಿಗಳನ್ನು ನಾವು ಬಿಜೆಪಿಗೆ ಕರೆಯುತ್ತೇವೆ. ಇನ್ನು ನಿರ್ಧರಿಸುವ ಕೆಲಸ ರಜನೀಕಾಂತ್‌ರದ್ದು ಎಂದು ಅಮಿತ್ ಶಾ ಹೇಳಿದ್ದಾರೆ. ಈಗ ನಮ್ಮ ಪಕ್ಷ ತಮಿಳ್ನಾಡಿನಲ್ಲಿ ದುರ್ಬಲವಾಗಿದೆ. ಕೇಂದ್ರಸರಕಾರದ ನೀತಿಯನ್ನು ಜನರಿಗೆ ತಲುಪಿಸಲು ಮತ್ತು ಪಕ್ಷದ ಸ್ಥಿತಿಯನ್ನು ಬಲಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿದರು.

 ತಮಿಳುನಾಡಿನ ಜನರ ಸೂಪರ್‌ಸ್ಟಾರ್ ರಜನೀಕಾಂತ್‌ಗೆ ಪಕ್ಷದಲ್ಲಿ ಸೂಕ್ತ ಸ್ಥಾನಗಳನ್ನು ನೀಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಹೇಳಿದ್ದರು. ರಜನೀಕಾಂತ್‌ರನ್ನು ರಾಜಕೀಯಕ್ಕೆ ಸ್ವಾಗತಿಸುವೆ. ಅವರು ಈಗ ಬಿಜೆಪಿಯ ಕುರಿತು ಚಿಂತನೆ ನಡೆಸಲಿ ಎಂದು ನಾನು ಮನವಿ ಮಾಡುತ್ತೇನೆ. ಪಕ್ಷದಲ್ಲಿ ಅವರಿಗೆ ಸೂಕ್ತಸ್ಥಾನಮಾನ ನೀಡಲಾಗುವುದು ಎಂದು ಗಡ್ಕರಿ ಹೇಳಿದ್ದರು.

ಸೂಕ್ತ ಸ್ಥಾನಮಾನ ಎಂದರೆ ಏನು. ಮುಖ್ಯಮಂತ್ರಿ ಅಭ್ಯರ್ಥಿಯಾಗಿಸಿ ರಜನೀಕಾಂತ್‌ರನ್ನು ರಾಜಕೀಯಕ್ಕೆ ಕರೆತರುವಿರಾ ಎನ್ನುವ ಪ್ರಶ್ನೆಗೆ ಅದನ್ನು ಪಕ್ಷದ ನೇತೃತ್ವ ತಿರ್ಮಾನಿಸುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News