×
Ad

ಆಧಾರ್ ಕಾರ್ಡ್‌ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?

Update: 2017-05-24 23:54 IST

ಆಧಾರ್ ಕಾರ್ಡ್ ಯೋಜನೆ 2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾಗಿದೆ. ಸರಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ. ಅನೇಕ ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳನ್ನು ಪಡೆಯುವ ಸೇತುವೆಯಾಗಿ ಆಧಾರ್ ಕಾರ್ಡ್ ಪ್ರಾಮುಖ್ಯತೆ ಪಡೆದಿದೆ.

ಆದರೆ ಆಧಾರ್ ಕಾರ್ಡ್ ಅರ್ಜಿ ತುಂಬುವ ಸಂದರ್ಭದಲ್ಲಿ ತಪ್ಪುಗಳಾಗಿದ್ದಲ್ಲಿ ಅದನ್ನು ಬದಲಾಯಿಸುವುದು ಅಥವಾ ಅಪ್ಡೇಟ್ ಮಾಡಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮದಿನಾಂಕ, ಮೊಬೈಲ್ ನಂಬರ್ ಇತ್ಯಾದಿ ತಪ್ಪುಗಳಿದ್ದಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲೇಬೇಕಾಗುತ್ತದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಕೆಲವು ಸೌಲಭ್ಯಗಳು ಸಿಗುವುದಿಲ್ಲ

ಆಧಾರ್ ಕಾರ್ಡ್‌ನಲ್ಲಿ ಬದಲಾವಣೆ ಅಥವಾ ಅಪ್ಡೇಟ್ ಆನ್‌ಲೈನ್ ಮೂಲಕ ಇಲ್ಲವೇ ಆಫ್‌ಲೈನ್ ಮೂಲಕ ಮಾಡಬಹುದು. ಇಲ್ಲಿ ಆನ್‌ಲೈನ್ ಮೂಲಕ ಆಧಾರ್ ತಪ್ಪುಗಳನ್ನು ಸರಿಪಡಿಸುವುದು ಹೇಗೆ ಎಂಬುದನ್ನು ನೋಡೋಣ...

ಆಧಾರ್ ವೆಬ್‌ಸೈಟ್
ಭಾರತ ಸರಕಾರದ ವಿಶಿಷ್ಟ ಗುರುತು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಿ. ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಅಥವಾ ಅಪ್ಡೇಟ್ ಮಾಡಲು ಯುಐಡಿಎಐ ಆಧಾರ್ ಕಾರ್ಡ್ ಸೆಲ್ಪ್ ಸರ್ವಿಸ್ ಅಪ್ಡೇಟ್ ಪೋರ್ಟಲ್(SSUP) ಪರಿಚಯಿಸಿದೆ.(https://ssup.uidai. gov.in/web/guest/update). ಈ ಪೋರ್ಟಲ್‌ಗೆ ಭೇಟಿ ಕೊಟ್ಟ ನಂತರ ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ. ತದನಂತರ ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕೋಡ್ ಬರುತ್ತದೆ.

ಏನು ಬದಲಾವಣೆ/ಅಪ್ಡೇಟ್ ಮಾಡಬಹುದು?
ಯುಐಡಿಎಐ ಆನ್‌ಲೈನ್ ಪೋರ್ಟಲ್ ಮೂಲಕ ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಅಪ್ಡೇಟ್ ಅಥವಾ ಬದಲಾವಣೆ ಮಾಡಬಹುದು.

ಹೆಸರು, ವಿಳಾಸ, ಲಿಂಗ, ಜನ್ಮದಿನಾಂಕ ಅಪ್ಡೇಟ್ ಹೇಗೆ?
ನಿಮ್ಮ ಮೊಬೈಲ್ ನಂಬರ್ ನೋಂದಣಿ ಆಗಿದ್ದರೆ ಮಾತ್ರ ಯುಐಡಿಎಐ ಮೂಲಕ ಆಧಾರ್ ಆನ್‌ಲೈನ್‌ನಲ್ಲಿ ಹೆಸರು ಬದಲಾಯಿಸಬಹುದು.

ಸರಳ ವಿಧಾನಗಳು:
1. ಯುಐಡಿಎಐ ಆಫಿಸಿಯಲ್ ಪೋರ್ಟಲ್‌ಗೆ ಭೇಟಿ ನೀಡಿ.
2. ಆಧಾರ್ ಅಪ್ಡೇಟ್ ಡೀಟೆಲ್ಸ್ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ
3. ನಿಮ್ಮ ಆಧಾರ್ ಡೇಟಾ ಅಪ್ಡೇಟ್(Upadate your aadhar data) ಮೇಲೆ ಕ್ಲಿಕ್ ಮಾಡಿ.
4. ಆಧಾರ್ ಸೆಲ್ಪ್‌ಸರ್ವಿಸ್ ಅಪ್ಡೇಟ್ ಪೋರ್ಟಲ್ ಪುಟ ತೆರೆದುಕೊಳ್ಳುತ್ತದೆ.
To submit your update/ correction request online please

5. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

Submit

6. ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಆಧಾರ್ ನಂಬರ್ ಟೈಪ್ ಮಾಡಿ.

7. ನೋಂದಾಯಿತ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ನಂತರ ಒಟಿಪಿ, ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಆಮೇಲೆ ಮಾಡಿ.

8. ಅಪ್ಡೇಟ್ ಮಾಡಬೇಕಾದ ಆಧಾರ್ ಪುಟ ತೆರೆದುಕೊಳ್ಳುತ್ತದೆ.

9. ಅಪ್ಡೇಟ್ ಕೋರಿಕೆ ಪುಟದಲ್ಲಿ ನೀವು ಬದಲಾಯಿಸಲು ಇಚ್ಛಿಸುವ(ಹೆಸರು, ವಿಳಾಸ, ಲಿಂಗ, ಜನ್ಮದಿನಾಂಕ) ವಿವರಗಳನ್ನು ಅಪ್ಡೇಟ್ ಮಾಡಬಹುದು.
BPO service provider based on the Avg. response time

10. ಎಲ್ಲಾ ಮಾಹಿತಿಗಳನ್ನು ತುಂಬಿದ ನಂತರ ಸೆಲೆಕ್ಟ್ ಮಾಡಿ. ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.

11. ಯಶಸ್ವಿ ಸಲ್ಲಿಕೆ ನಂತರ ಅಪ್ಡೇಟ್ ರಿಕ್ವೆಸ್ಟ್ ನಂಬರ್(URN) ಜನರೇಟ್ ಆಗುತ್ತದೆ. ತದನಂತರ ನಿಮಗೆ ಸಂದೇಶ ಬರುತ್ತದೆ. ಇಲ್ಲಿಗೆ ನಿಮ್ಮ ಆನ್‌ಲೈನ್ ಅಪ್ಡೇಟ್ ಪ್ರಕ್ರಿಯೆ ಯಶಸ್ವಿಯಾಗುತ್ತದೆ.

ಹೊಸ ಮೊಬೈಲ್ ನಂಬರ್ ಸೇರ್ಪಡೆ ಹೇಗೆ?
ಈಗಾಗಲೇ ನೋಂದಾಯಿಸಲ್ಪಟ್ಟ ಮೊಬೈಲ್ ನಂಬರ್ ಹೊರತುಪಡಿಸಿ ಹೊಸ ನಂಬರ್ ಸೇರಿಸಲು ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬೇಕು.

ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ. ನಿಮ್ಮ 12 ಅಂಕೆಗಳ ಆಧಾರ್ ನಂಬರ್ ಮತ್ತು ನೋಂದಾಯಿತ ಹಳೆ ಮೊಬೈಲ್ ನಂಬರ್ ಒದಗಿಸಿ. ಹೊಸದಾಗಿ ನೀಡಿದ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ.ಒಟಿಪಿ ಪರಿಶೀಲನೆ ನಂತರ ಬಯೋಮೆಟ್ರಿಕ್ ಸ್ಕ್ಯಾನ್ ಮಾಡಲಾಗುತ್ತದೆ.ಪ್ರಕ್ರಿಯೆ ಪೂರ್ಣಗೊಂಡ ನಂತರ ಹೊಸ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಬರುತ್ತದೆ. 72 ಗಂಟೆಗಳ ಒಳಗಾಗಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಲಾಗುತ್ತದೆ.

ಆಧಾರ್ ಕಾರ್ಡ್ ಯಾಕೆ ಬೇಕು?
ಎಲ್ಪಿಜಿ ಸಬ್ಸಿಡಿ, ಜನ್ ಧನ್ ಯೋಜನೆ, ಪಾಸ್‌ಪೋರ್ಟ್, ಡಿಜಿಟಲ್ ಲಾಕರ್, ಚುನಾವಣಾ ಚೀಟಿ ಲಿಂಕ್, ತಿಂಗಳ ಪಿಂಚಣಿ, ಪ್ರಾವಿಡೆಂಟ್ ಫಂಡ್, ಹೊಸ ಖಾತೆ ತೆರೆಯಲು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು, ಆದಾಯ ತೆರಿಗೆ ಕಟ್ಟಲು ಆಧಾರ್ ಕಾರ್ಡ್ ಬೇಕಾಗುತ್ತದೆ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News