×
Ad

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಿ ಮತ್ತು ಗೋಹಂತಕರನ್ನು ಜೀವಾವಧಿ ಶಿಕ್ಷೆಗೊಳಪಡಿಸಿ

Update: 2017-05-31 13:43 IST

ಜೈಪುರ್,ಮೇ 31: ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವಂತೆ ಮತ್ತು ಗೋಹಂತಕರಿಗೆ ಜೀವಾವಧಿ ಶಿಕ್ಷೆಯನ್ನು ಖಚಿತ ಪಡಿಸುವಂತೆ ರಾಜಸ್ಥಾನ ಉಚ್ಚ ನ್ಯಾಯಾಲಯವು ಬುಧವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಇಲ್ಲಿಗೆ ಸಮೀಪದ ಹಿಂಗೋನಿಯಾದಲ್ಲಿರುವ ಸರಕಾರಿ ಗೋಶಾಲೆಯಲ್ಲಿ 500ಕ್ಕೂ ಅಧಿಕ ದನಗಳ ಸಾವುಗಳ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನ್ಯಾ.ಮಹೇಶಚಂದ್ ಶರ್ಮಾ ಅವರ ಪೀಠವು ಈ ನಿರ್ದೇಶವನ್ನು ಹೊರಡಿಸಿತು. ಬುಧವಾರ ನ್ಯಾ.ಶರ್ಮಾ ಅವರ ಸೇವಾವಧಿಯ ಕೊನೆಯ ದಿನವಾಗಿತ್ತು.

ಕೇಂದ್ರ ಸರಕಾರವು ಜಾನುವಾರು ಮಾರುಕಟ್ಟೆಗಳಲ್ಲಿ ಕಸಾಯಿಖಾನೆಗಳಿಗೆ ಜಾನುವಾರು ಗಳ ಮಾರಾಟವನ್ನು ನಿಷೇಧಿಸಿದ ಬಳಿಕ ಗೋಹತ್ಯೆ ಮತ್ತು ಬೀಫ್ ಬಳಕೆ ಕುರಿತು ರಾಷ್ಟ್ರವ್ಯಾಪಿ ನಡೆಯುತ್ತಿರುವ ಚರ್ಚೆಯ ಮಧ್ಯೆಯೇ ನ್ಯಾಯಾಲಯದ ಈ ನಿರ್ದೇಶ ಹೊರಬಿದ್ದಿದೆ.

ಗೋಶಾಲೆಯಲ್ಲಿ ಮತ್ತು ಅದರ ಸುತ್ತ ಪ್ರತಿವರ್ಷ 5,000 ಸಸಿಗಳನ್ನು ನೆಡುವಂತೆಯೂ ರಾಜ್ಯ ಅರಣ್ಯ ಇಲಾಖೆಗೆ ನ್ಯಾಯಾಲಯವು ನಿರ್ದೇಶ ನೀಡಿದೆ. ಬಿಜೆಪಿ ಆಡಳಿತದ ರಾಜಸ್ಥಾನವು ಗೋಹತ್ಯೆಯ ವಿರುದ್ಧ ಅತ್ಯಂತ ಕಠಿಣ ಕಾನೂನನ್ನು ಹೊಂದಿದೆ.

ಹಿಂಗೋನಿಯಾದ ಗೋಶಾಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ದನಗಳು ಹಸಿವಿನಿಂದ ಸಾವನ್ನಪ್ಪಿದ್ದು, ಇದು ಸರಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News