ಛತ್ತೀಸ್‌ಗಡ:ನಕ್ಸಲರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಗುಂಡಿನ ಕಾಳಗ
Update: 2017-05-31 14:54 IST
ರಾಯಪುರ್,ಮೇ 31: ಛತ್ತೀಸ್‌ಗಡದ ನಾರಾಯಣಪುರ ಜಿಲ್ಲೆಯ ಅರಣ್ಯದಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಭೀಷಣ ಗುಂಡಿನ ಕಾಳಗ ನಡೆದಿದೆ.
ಎರಡೂ ಕಡೆಗಳಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದರು.
ಬಂಡುಕೋರರ ಚಲನವಲನಗಳ ಬಗ್ಗೆ ಮಾಹಿತಿ ಪಡೆದಿದ್ದ ವಿಶೇಷ ಕಾರ್ಯಪಡೆ ಮತ್ತು ಜಿಲ್ಲಾ ರಿಸರ್ವ್ ಗಾರ್ಡ್‌ನ ಜಂಟಿ ತಂಡವು ಬುಧವಾರ ರಾತ್ರಿ ಛೋಟೆ ರೈನಾರ್ ಗ್ರಾಮ ವ್ಯಾಪ್ತಿಯ ಅರಣ್ಯಕ್ಕೆ ಮುತ್ತಿಗೆ ಹಾಕಿತ್ತು ಎಂದು ಎಸ್‌ಪಿ ಸಂತೋಷ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಬುಧವಾರ ಬೆಳಗಿನ ಜಾವ ಆರಂಭಗೊಂಡ ಗುಂಡಿನ ಕಾಳಗ ಸುಮಾರು ನಾಲ್ಕು ಗಂಟೆಗಳ ಕಾಲ ಮುಂದುವರಿದಿತ್ತು. ಭದ್ರತಾ ಪಡೆಗಳ ಕೈ ಮೇಲಾಗುತ್ತಿದ್ದಂತೆ ನಕ್ಸಲರು ಪರಾರಿಯಾಗಿದ್ದಾರೆ.
ಮಂಗಳವಾರ ನಕ್ಸಲರು ರಸ್ತೆಯೊಂದನ್ನು ಹಾನಿಗೊಳಿಸಿ ಖಾಲಿ ಬಸ್ಸಿಗೆ ಬೆಂಕಿ ಹಚ್ಚಿದ್ದ ಜೋರಿಗಾಂವ ಸಮೀಪವೇ ಈ ಛೋಟೆ ರೈನಾರ್ ಗ್ರಾಮವಿದೆ.