ಎಸ್ ಬಿಐ ಶಾಖೆಗೆ ನುಗ್ಗಿ 16.80 ಲಕ್ಷ ದೋಚಿದ ದರೋಡೆಕೋರರು

Update: 2017-06-01 15:32 GMT

ಜಾರ್ಖಂಡ್, ಜೂ.1: ದರೋಡೆಕೋರರ ಗುಂಪೊಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್  ಶಾಖೆಯೊಂದಕ್ಕೆ ನುಗ್ಗಿ 16.80 ಲಕ್ಷ ರೂ. ದೋಚಿದ ಘಟನೆ ಜಾರ್ಖಂಡ್ ನ ದಿಯೋಘರ್ ಜಿಲ್ಲೆಯ ಬಾಜಿಲಾಚೌಕ್ ನಲ್ಲಿ ನಡೆದಿದೆ,

ಬಾಜಿಲಾಚೌಕ್ ನ ಎಸ್ ಬಿಐ ಶಾಖೆಗೆ ನುಗ್ಗಿದ 6 ಜನ ದರೋಡೆಕೋರರ ತಂಡ ಬಂದೂಕು ತೋರಿಸಿ ಬ್ಯಾಂಕ್ ಮ್ಯಾನೇಜರ್ ಹಾಗೂ ಇತರ ಸಿಬ್ಬಂದಿಯನ್ನು ಬೆದರಿಸಿ ಹಣ ದೋಚಿ ಪರಾರಿಯಾಗಿದ್ದಾರೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಡಿಐಜಿ ಅಖಿಲೇಶ್ ಝಾ ಹಾಗೂ ಸುಪರಿಟೆಂಡೆಂಟ್ ಆಫ್ ಪೊಲೀಸ್ ವಿಜಯಲಕ್ಷ್ಮಿ ಸ್ಥಳಕ್ಕೆ ಭೇಟಿ ನೀಡಿದದ್ದಾರೆ.

“ದರೋಡೆಕೋರರು ಸಿಬ್ಬಂದಿಯ ಮೊಬೈಲ್ ಗಳನ್ನು ದೋಚಿದ್ದಾರೆ. ಗ್ರಾಹಕರ ಸೋಗಿನಲ್ಲಿ ಬ್ಯಾಂಕ್ ಗೆ ನುಗ್ಗಿದ ದುಷ್ಕರ್ಮಿಗಳು ಹಣ ದೋಚಿ 10 ನಿಮಿಷಗಳೊಳಗಾಗಿ ಪರಾರಿಯಾಗಿದ್ದಾರೆ” ಎಂದು ವಿಜಯಲಕ್ಷ್ಮೀ ಮಾಹಿತಿ ನೀಡಿದ್ದಾರೆ.

ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಈಗಾಗಲೇ ಕೆಲವರ ಗುರುತು ಪತ್ತೆಯಾಗಿದೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News