ಆ್ಯಂಬುಲೆನ್ಸ್ ಸೇವೆ ಅಲಭ್ಯ: ರಿಕ್ಷಾದಲ್ಲಿ ಜನಿಸಿ ಕ್ಷಣದಲ್ಲೇ ಸಾವನ್ನಪ್ಪಿದ ಮಗು
Update: 2017-06-01 21:23 IST
ಮುಝಫ್ಫರ್ ಪುರ, ಜೂ.1: ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆ್ಯಂಬುಲೆನ್ಸ್ ಸೌಲಭ್ಯ ದೊರಕದೆ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲೇ ಮಗುವಿಗೆ ಜನ್ಮ ನೀಡಿದ್ದು, ಹುಟ್ಟಿದ ಕೆಲ ಕ್ಷಣಗಳಲ್ಲೇ ಮಗು ಮೃತಪಟ್ಟ ಘಟನೆ ಉತ್ತರ ಬಿಹಾರದ ಮುಝಫ್ಫರ್ ಪುರದ ರಘುನಂತಪುರದಲ್ಲಿ ನಡೆದಿದೆ.
ರಘುನಂತಪುರದ ನಿವಾಸಿ ರೇಖಾದೇವಿಯವರಿಗೆ ಹೆರಿಗೆ ನೋವು ಪ್ರಾರಂಭವಾಗಿತ್ತು. ಈ ಸಂದರ್ಭ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿದ್ದರೂ ಆ್ಯಂಬುಲೆನ್ಸ್ ಸೇವೆ ಲಭಿಸಿರಲಿಲ್ಲ. ಆದ್ದರಿಂದ ಮುಝಫ್ಫರ್ ಪುರ ಸಾದರ್ ಆಸ್ಪತ್ರೆಗೆ ರಿಕ್ಷಾ ಮೂಲಕ ತೆರಳಬೇಕಾಯಿತು.
“ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಆ್ಯಂಬುಲೆನ್ಸ್ ಒದಗಿಸಿದ್ದರೆ ಆಕೆ ರಿಕ್ಷಾದಲ್ಲಿ ಹೊಂಡಗುಂಡಿಗಳು ತುಂಬಿದ ರಸ್ತೆಯಲ್ಲಿ ಸಾಗಬೇಕಾಗಿರಲಿಲ್ಲ. ಅಲ್ಲದೆ, ಮಗು ಕೂಡ ಸುರಕ್ಷಿತವಾಗಿರುತ್ತಿತ್ತು” ಎಂದು ರೇಖಾ ದೇವಿಯವರ ಸಂಬಂಧಿ ಸಂಜಯ್ ಹೇಳುತ್ತಾರೆ.
ಆಸ್ಪತ್ರೆಯಲ್ಲಿರುವ ರೇಖಾ ಚೇತರಿಸುತ್ತಿದ್ದಾರೆ.