×
Ad

ಫ್ಲೈಯಿಂಗ್ ಸ್ಕೂಲ್‌ಗೆ ಮುಚ್ಚುಗಡೆ ಭಯ

Update: 2017-06-02 23:52 IST

ಮಾನ್ಯರೆ,
ಬೆಂಗಳೂರಲ್ಲಿರುವ ವಿಮಾನ ಹಾರಾಟದ ತರಬೇತಿ ಸಂಸ್ಥೆ ಗವರ್ನ್‌ಮೆಂಟ್ ಟ್ರೈನಿಂಗ್ ಫ್ಲೈಯಿಂಗ್ ಸ್ಕೂಲ್ ಮುಚ್ಚುವ ಹಾದಿಯಲ್ಲಿದೆ. ಇದಕ್ಕೆ ನೇರ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ.
ಬೆಂಗಳೂರು ಏರ್ ಪೋರ್ಟ್‌ಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಜಕ್ಕೂರು ಮೆಟ್ರೋ ರೈಲು ಮಾರ್ಗವನ್ನು ಅಂತಿಮಗೊಳಿಸಲಾಗಿದೆ. ಇದುವೇ ಈ ಶಾಲೆಯನ್ನು ಮುಚ್ಚುವಂತೆ ಮಾಡಲಿದೆ.
ಫ್ಲೈಯಿಂಗ್ ಸ್ಕೂಲ್‌ನಲ್ಲಿ ಮೊದಲು 854 ಮೀ. ರನ್ ವೇ ಇತ್ತು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಗಾಗಿ ಜಾಗ ಬಿಟ್ಟುಕೊಟ್ಟಿದ್ದರಿಂದ ರನ್ ವೇ ಉದ್ದ 413 ಮೀ. ಗೆ ಇಳಿಯಿತು. ಹೀಗಾಗಿ 413 ಮೀಟರ್ ರನ್ ವೇನಲ್ಲಿ ಸದ್ಯ ವಿಮಾನ ಹಾರಾಟದ ತರಬೇತಿ ನೀಡಲಾಗುತ್ತಿದೆ. ಇದೀಗ ಮೆಟ್ರೋ ಮಾರ್ಗ ನಿರ್ಮಾಣವಾದರೆ 238 ಮೀ. ಮಾತ್ರ ರನ್ ವೇ ಸಿಗುತ್ತದೆ. ಇದರಲ್ಲಿ ವಿಮಾನ ಟೇಕ್ ಆಫ್ ಮಾಡುವುದಕ್ಕೆ ಕೂಡಾ ಆಗಲಾರದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಕೂಲನ್ನು ಮುಚ್ಚದಂತೆ ಮೆಟ್ರೋ ರೈಲು ಮಾರ್ಗದ ನಕ್ಷೆಯಲ್ಲಿ ಬದಲಾವಣೆ ಮಾಡಬೇಕಾಗಿದೆ.
 

Writer - -ಶಂಶೀರ್ ಬುಡೋಳಿ, ಬೆಂಗಳೂರು

contributor

Editor - -ಶಂಶೀರ್ ಬುಡೋಳಿ, ಬೆಂಗಳೂರು

contributor

Similar News