ಮೋದಿ ಆಡಳಿತದ ನಿರ್ಧಾರಗಳು

Update: 2017-06-11 18:28 GMT

ಮಾನ್ಯರೆ

ದೇಶದ ಆರ್ಥಿಕತೆಗೆ ಡಾ. ಮನಮೋಹನ್ ಸಿಂಗ್ ಅವರು ಹಾಕಿದ ಭದ್ರ ಬುನಾದಿಯನ್ನು ಈ ಅಶಿಕ್ಷಿತ ಮೋದಿ ಆಡಳಿತದ ತಪ್ಪು ನಿರ್ಧಾರ ಗಳು ಜರ್ಜರಿತಗೊಳಿಸಿವೆ.
1. ರೈಲು ಪ್ರಯಾಣ ದರಗಳು ಹಿಂದಿಗಿಂತ ಹತ್ತರಷ್ಟು ಹೆಚ್ಚಿಸಲಾಗಿದೆ.
2. ಪ್ರತೀ ದಿನ ಪೆಟ್ರೋಲ್-ಡೀಸೆಲ್ ಮತ್ತು ಅಡುಗೆ ಅನಿಲಗಳ ಬೆಲೆ ಏರುತ್ತಲೇ ಇವೆ.
3. ದಿನ ಬಳಕೆಯ ವಸ್ತುಗಳ ಬೆಲೆ ಗಗನ ಏರುತ್ತಿವೆ.
4. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ದರ ಸಿಗುತ್ತಿಲ್ಲ.
5. ಎಲ್ಲ ಬಗೆಯ ತೆರಿಗೆಗಳು ಗಗನಮುಖಿಯಾಗಿವೆ.
6. ಬ್ಯಾಂಕಿಂಗ್ ವ್ಯವಹಾರಗಳೂ ಬಡ-ಮಧ್ಯಮ ವರ್ಗದ ಜನಗಳಿಗೆ ಹಿಂಸೆಯನ್ನೇ ನೀಡುತ್ತಿವೆ.
6. ಯುವಕರಿಗೆ ಯಾವುದೇ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಬದಲಾಗಿ ನೋಟು ಅಮಾನೀಕರಣದಂತ ಹುಂಬ ನಿರ್ಧಾರದಿಂದ ಸಣ್ಣ ಪುಟ್ಟ ಉದ್ಯಮಗಳು ನಷ್ಟವಾಗಿ ಜನ ಬೀದಿಗೆ ಬಂದಿದ್ದಾರೆ.
7. ಅಸಂಘಟಿತ ವಲಯವನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ.
8. ಜಿಡಿಪಿ ಬೆಳವಣಿಗೆ ಗಮನಾರ್ಹ ಕುಸಿತ ಕಂಡಿದ್ದು ಕಡಿಮೆ ಆದಾಯದ ಸಾರ್ವಜನಿಕರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
9. ಎಲ್ಲ ರಂಗಗಳಲ್ಲೂ ಆರ್ಥಿಕ ಹಿಂಜರಿತದಿಂದ ದೇಶದ ಆರ್ಥಿಕ ಸ್ಥಿತಿಗತಿ ಅಧೋಗತಿಗೆ ಬಂದು ನಿಂತಿದೆ.
ಆದರೆ, ಇವೆಲ್ಲವುಗಳ ನಡುವೆ ಈ ಮೂರ್ಖರ ಆದ್ಯತೆ ದನವನ್ನು ಮಾತೆ ಎನ್ನುವ-ರಾಮನ ಗುಡಿ ಕಟ್ಟುವತ್ತಲೇ ಗಿರಕಿ ಹೊಡೆಯುತ್ತಿರುವುದು ದುರಂತದ ವಿಷಯ.

Writer - -ಡಾ.ಜೆ.ಎಸ್. ಪಾಟೀಲ. ವಿಜಯಪುರ

contributor

Editor - -ಡಾ.ಜೆ.ಎಸ್. ಪಾಟೀಲ. ವಿಜಯಪುರ

contributor

Similar News