×
Ad

ರೊನಾಲ್ಡೊ ವಿರುದ್ಧ ತೆರಿಗೆ ವಂಚನೆ ಮೊಕದ್ದಮೆ ದಾಖಲು

Update: 2017-06-13 23:56 IST

ಮ್ಯಾಡ್ರಿಡ್,ಜೂ.13: ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 2011 ಹಾಗೂ 2014ರ ನಡುವೆ ಸ್ಪೇನ್‌ನ ಆದಾಯ ತೆರಿಗೆ ಇಲಾಖೆಗೆ 14.7 ಮಿಲಿಯನ್ ಯುರೋಸ್(16.48 ಮಿಲಿಯನ್ ಡಾಲರ್) ತೆರಿಗೆಯನ್ನು ವಂಚಿಸಿರುವುದಕ್ಕೆ ಸಂಬಂಧಿಸಿ ಅವರ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸ್ಪೇನ್‌ನ ಪ್ರಾಸಿಕ್ಯೂಟರ್ ಕಚೇರಿಯು ಮಂಗಳವಾರ ತಿಳಿಸಿದೆ.

ಸ್ಪೇನ್‌ನಲ್ಲಿ ತನ್ನ ಇಮೇಜ್ ರೈಟ್ಸ್‌ನ ಮೂಲಕ ಗಳಿಸಿರುವ ಆದಾಯವನ್ನು ಅಡಗಿಸಿಡುವ ಉದ್ದೇಶದಿಂದ 2010ರಲ್ಲಿ ಆರಂಭಿಸಲಾಗಿರುವ ಉದ್ಯಮಗಳಲ್ಲಿ ರೊನಾಲ್ಡೊ ಹಣ ಹೂಡಿಕೆ ಮಾಡಿದ್ದರು ಎಂದು ಪ್ರಾಸಿಕ್ಯೂಟರ್ ಕಚೇರಿ ಆರೋಪಿಸಿದೆ.

ರೊನಾಲ್ಡೊ ಅವರು 2011ರಲ್ಲಿ 1.4 ಮಿಲಿಯನ್ ಯುರೋಸ್, 2012ರಲ್ಲಿ 1.7 ಮಿಲಿಯನ್ ಯುರೋಸ್, 2013ರಲ್ಲಿ 3.2 ಯುರೋಸ್ ಹಾಗೂ 2014ರಲ್ಲಿ 8.5 ಮಿಲಿಯನ್ ಯುರೋಸ್‌ನ್ನು ಆದಾಯ ತೆರಿಗೆ ಇಲಾಖೆಗೆ ವಂಚಿಸಿದ್ದಾರೆಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News