×
Ad

ಸುನ್ನಿ, ಶಿಯಾ ವಕ್ಫ್ ಮಂಡಳಿಗಳ ವಿಸರ್ಜನೆಗೆ ಮುಂದಾದ ಆದಿತ್ಯನಾಥ್ ಸರಕಾರ

Update: 2017-06-15 20:57 IST

ಲಕ್ನೋ, ಜೂ.15:  ಶಿಯಾ ಹಾಗೂ ಸುನ್ನಿ ವಕ್ಫ್ ಬೋರ್ಡ್ ಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ಶೀಘ್ರದಲ್ಲೇ ಎರಡೂ ಮಂಡಳಿಗಳನ್ನು ವಿಸರ್ಜಿಸಲಿದೆ ಎಂದು ಹೇಳಿದೆ.

ಎರಡೂ ಮಂಡಳಿಗಳ ವಿಸರ್ಜನೆಗೆ ಮುಖ್ಯಮಂತ್ರಿ ಆದಿತ್ಯನಾಥ್ ಅನುಮೋದನೆ ನೀಡಿದ್ದಾರೆ ಎಂದು ವಕ್ಫ್ ರಾಜ್ಯ ಸಚಿವ ಮೊಹ್ಸಿನ್ ರಾಜಾ ಹೇಳಿದ್ದಾರೆ.

ಶಿಯಾ ಹಾಗೂ ಸುನ್ನಿ ವಕ್ಫ್ ಮಂಡಳಿಗಳ ಆಸ್ತಿಗೆ ಸಂಬಂಧಿಸಿ ಭಾರೀ ಭ್ರಷ್ಟಾಚಾರದ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಿದ್ದ ಭಾರತೀಯ ವಕ್ಫ್ ಕೌನ್ಸಿಲ್ ಭ್ರಷ್ಟಾಚಾರ ನಡೆದಿದೆ ಎಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News