×
Ad

ಪ್ರಯಾಣಿಕನ ಚಿನ್ನದ ಸರ ಕದ್ದ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ!

Update: 2017-06-16 16:34 IST

ಕರಿಪ್ಪೂರ್(ಕೇರಳ), ಜೂ. 16: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಚಿನ್ನದ ಸರ ಎಗರಿಸಿದ ಕಸ್ಟಮ್ಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಹವಾಲ್ದಾರ್ ಅಬ್ದುಲ್ ಕರೀಂ ಸರಕದಿಯುವ ದೃಶ್ಯಗಳು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿತ್ತು.

 ಮೇ. 19ಕ್ಕೆ ಘಟನೆ ನಡೆದಿದ್ದು, ಗಲ್ಫ್‌ನಿಂದ ಮರಳುತ್ತಿದ್ದ ಪ್ರಯಾಣಿಕನ ಬ್ಯಾಗ್ ಪರಿಶೀಲನೆ ವೇಳೆ ಕಸ್ಟಮ್ಸ್ ಅಧಿಕಾರಿಗಳ ಮೇಜಿನ ಮೇಲೆ ಇಟ್ಟಿದ್ದ ಮೂರು ಪವನ್‌ನ ಚಿನ್ನದ ಸರವನ್ನು ಈತ ಮೆಲ್ಲನೆ ತೆಗೆದು ಜೇಬಿನೊಳಗೆ ಸೇರಿಸಿದ್ದ. ಆದರೆ ಕಸ್ಟಮ್ಸ್ ಉದ್ಯೋಗಿಯೇ ಕಳ್ಳನಾದ ದೃಶ್ಯವನ್ನು ಸಿಸಿಟಿವಿ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News