ಅತಿಯಾದ ಮೊಬೈಲ್ ವ್ಯಸನ

Update: 2017-06-20 18:10 GMT

ಮಾನ್ಯರೆ,

ಇತ್ತೀಚೆಗೆ ಯುವಜನತೆ ತಮ್ಮ ಹೆಚ್ಚಿನ ಅಮೂಲ್ಯ ಸಮಯವನ್ನು ಅನವಶ್ಯಕವಾಗಿ ಮೊಬೈಲ್ ಫೋನ್‌ಗಳಲ್ಲಿ ಕಳೆಯುತ್ತಿರುವುದು ಖೇದಕರ ಸಂಗತಿ. ನಾಲ್ಕು ಜನ ನಿಂತುಕೊಂಡು ಪರಸ್ಪರ ಚರ್ಚೆಯಲ್ಲಿ ತೊಡಗಿದರೆ ಒಬ್ಬರು ಇನ್ನೊಬ್ಬರ ಮುಖ ನೋಡದೆ ಮೊಬೈಲ್‌ನಲ್ಲೇ ದೃಷ್ಟಿನೆಟ್ಟಿರುತ್ತಾರೆ. ರಸ್ತೆ ದಾಟುವಾಗ, ವಾಹನಗಳ ಚಾಲನೆ ಸಂದರ್ಭಗಳಲ್ಲಿ ಹೆಚ್ಚಿನವರು ಬಹಳ ನಿರ್ಲಕ್ಷದಿಂದ ಮೊಬೈಲನ್ನು ಬಳಸುತ್ತಾರೆ. ಇದರಿಂದ ಅವರು ಬಲಿಯಾಗುವುದು ಮಾತ್ರವಲ್ಲದೆ ಇನ್ನೊಬ್ಬರ ಜೀವಕ್ಕ್ಕೂ ಕುತ್ತು ತಂದೊಡ್ಡುತ್ತಾರೆ. ಬಸ್ ಪ್ರಯಾಣದ ಸಂದರ್ಭಗಳಲ್ಲಂತೂ ಹೆಡ್‌ಫೋನ್ ಕಿವಿಯಲ್ಲಿ ಹಾಕಿಕೊಂಡು ಮೊಬೈಲ್‌ಗಳಲ್ಲಿ ಮಗ್ನರಾಗುವ ಯುವಜನತೆಯಿಂದ ಕಂಡಕ್ಟರ್ ಟಿಕೆಟ್ ಪಡೆಯಲು ಕೂಗಿ ಹರಸಾಹಸ ಪಡಬೇಕಾಗುತ್ತ್ತದೆ. ಈ ಮೊಬೈಲ್ ಬಳಕೆಯ ವ್ಯಸನ ಯುವಜನತೆಯನ್ನು ನಿಷ್ಕ್ರಿಯತೆಗೆ ತಳ್ಳುತ್ತಿದ್ದು, ಇನ್ನಾದರೂ ಯುವಜನತೆ ಈ ಬಗ್ಗೆ ಎಚ್ಚರಗೊಳ್ಳಬೇಕಾಗಿದೆ.
 

Writer - -ರಿಯಾಝ್ ಅಹ್ಮದ್, ರೋಣ

contributor

Editor - -ರಿಯಾಝ್ ಅಹ್ಮದ್, ರೋಣ

contributor

Similar News