ಜುಲೈ 1ರಿಂದ ಆಧಾರ್-ಪಾನ್ ಜೋಡಣೆ ಕಡ್ಡಾಯ

Update: 2017-06-28 14:00 GMT

ಹೊಸದಿಲ್ಲಿ, ಜೂ. 28: ಆಧಾರ್ ಕಾರ್ಡ್ ಸಂಖ್ಯೆಯನ್ನು ತೆರಿಗೆ ಪಾವತಿಸುವ ಪಾನ್ ಕಾಡ್‌ನೊಂದಿಗೆ ಜೋಡಿಸುವುದು ಜುಲೈ 1ರಿಂದ ಕೇಂದ್ರ ಸರಕಾರ ಕಡ್ಡಾಯಗೊಳಿದೆ.

ಆದಾಯ ತೆರಿಗೆ ನಿಯಮಕ್ಕೆ ತಿದ್ದುಪಡಿ ಮಾಡಿರುವ ಬಗ್ಗೆ ಕೇಂದ್ರ ಸರಕಾರ ಇಂದು ಅಧಿಸೂಚನೆ ಹೊರಡಿಸಿದ್ದು, ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಸಂದರ್ಭ 12 ಅಂಕೆಯ ಬಯೋಮೆಟ್ರಿಕ್ ಆಧಾರ್ ಕಾರ್ಡ್ ಅಥವಾ ಐಡಿ ದಾಖಲಾತಿ ಕಡ್ಡಾಯ ಎಂದು ಅಧಿಸೂಚನೆಯಲ್ಲಿ ಅದು ಹೇಳಿದೆ.

2017-18ರಲ್ಲಿ ಮಂಡಿಸಲಾದ ಹಣಕಾಸು ಮಸೂದೆಯಲ್ಲಿ ತೆರಿಗೆ ಪ್ರಸ್ತಾವಕ್ಕೆ ತಿದ್ದುಪಡಿ ಮಾಡುವ ಮೂಲಕ ಹಣಕಾಸು ಸಚಿವ ಅರುಣ್ ಜೇಟ್ಲಿ ತೆರಿಗೆ ಪಾವತಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದಾಗಿ ತಿಳಿಸಿದ್ದರು. ಹಲವು ಪಾನ್ ಕಾರ್ಡ್‌ಗಳನ್ನು ಬಳಸಿ ತೆರಿಗೆ ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ತೆರಿಗೆ ತಪ್ಪಿಸುವುದನ್ನು ಪರಿಶೀಲಿಸಲು ಕೇಂದ್ರ ಸರಕಾರ ಈ ಮಹತ್ವದ ನಿರ್ಣಯ ಕೈಗೊಂಡಿತ್ತು.

2017 ಜುಲೈ 1ರ ವೇಳೆ ಪಾನ್ ಕಾರ್ಡ್ ಪಡೆದುಕೊಂಡ ಪ್ರತಿಯೊಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ ಸಂಖ್ಯೆಯನ್ನು 139ಎಎ ಪರಿಚ್ಛೇದದ ಉಪಪರಿಚ್ಛೇದ (2)ರ ಅಡಿಯಲ್ಲಿ ಸಲ್ಲಿಸಬಯಸಿದರೆ ಆದಾಯ ತೆರಿಗೆಯ (ಸಿಸ್ಟಮ್) ಪ್ರಾಥಮಿಕ ಪ್ರಧಾನ ನಿರ್ದೇಶಕ ಅಥವಾ ಡಿಜಿಐಟಿ (ಸಿಸ್ಟಮ್) ಅವರಿಗೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆ ತಿಳಿಸಿದೆ.

ಪಾನ್ ಕಾರ್ಡ್ ಪಡೆಯಲು ಸಲ್ಲಿಸುವ ಅರ್ಜಿಯನ್ನು ನಿರ್ವಹಿಸುವ ಐಟಿ ಕಾಯ್ದೆಯ 114ನೇ ನಿಯಮಕ್ಕೆ ತಿದ್ದುಪಡಿ ತರಲಾಗಿದೆ ಎಂದು ಹೇಳಿರುವ ಕಂದಾಯ ಇಲಾಖೆ, ಇದು 2017 ಜುಲೈ 1ರಿಂದ ಅಸ್ತಿತ್ವಕ್ಕೆ ಬರಲಿದೆ ಎಂದಿದೆ.

 ಈಗಾಗಲೇ 2.07 ಕೋಟಿ ತೆರಿಗೆ ಪಾವತಿದಾರರು ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಜೊಡಣೆ ಮಾಡಿದ್ದಾರೆ. ದೇಶದಲ್ಲಿ 111 ಕೋಟಿ ಜನರಿಗೆ ಆಧಾರ್ ಕಾರ್ಡ್ ನೀಡಿದ್ದರೆ, ಪಾನ್ ಕಾರ್ಡ್‌ನ್ನು 25 ಕೋಟಿ ಜನರಿಗೆ ನೀಡಲಾಗಿದೆ.

ಪಾನ್ ಕಾರ್ಡ್ ಬದಲು ಆಧಾರ್ ಮಾತ್ರ

 ಕೇಂದ್ರ ಸರಕಾರ ಪಾನ್ ಕಾರ್ಡ್ ಬದಲು ಆಧಾರ್ ಕಾರ್ಡ್‌ನ್ನೇ ಎಲ್ಲದಕ್ಕೂ ಪರಿಗಣಿಸಲಿದೆಯೇ? ಈ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಕೆಲವು ಸುಳಿವು ನೀಡಿದ್ದಾರೆ. ಪಾನ್ ಕಾರ್ಡ್ ಅರ್ಜಿ ಹಾಗೂ ಆದಾಯ ತೆರಿಗೆ ಮರು ಪಾವತಿಗೆ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸುವ ಮೂಲಕ ಕೇಂದ್ರ ಸರಕಾರ ಆಧಾರ್ ಕಾರ್ಡ್‌ನ್ನೇ ಪರಿಪೂರ್ಣ ಕಾರ್ಡ್ ಎಂದು ಪರಿಗಣಿಸುವ ಸಾಧ್ಯತೆ ಇಲ್ಲಿದಲ್ಲ.

► ಪಾನ್ ಕಾರ್ಡ್ ಅರ್ಜಿ ಸಲ್ಲಿಸುವಾಗ ಅಧಾರ್ ಕಾರ್ಡ್ ಕಡ್ಡಾಯ

► 2.07 ಕೋಟಿ ತೆರಿಗೆ ಪಾವತಿದಾರರು ಈಗಾಗಲೇ ತಮ್ಮ ಪಾನ್ ಕಾರ್ಡ್‌ನ್ನು ಆಧಾರ್ ಕಾರ್ಡ್‌ನೊಂದಿಗೆ ಜೊಡಿಸಿದ್ದಾರೆ.

► ಹಲವು ಪಾನ್ ಕಾರ್ಡ್ ಮೂಲಕ ತೆರಿಗೆ ತಪ್ಪಿಸುವುದನ್ನು ಪರಿಶೀಲಿಸಲು ಈ ನಿರ್ಧಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News