ವಾರಣಾಸಿ : ಕಾವಲುಗಾರನಿಂದ 70 ವರ್ಷದ ಫ್ರೆಂಚ್ ಮಹಿಳೆಯ ಮೇಲೆ ಅತ್ಯಾಚಾರ

Update: 2017-06-29 10:23 GMT

ವಾರಣಾಸಿ ,29: ಎಪ್ಪತ್ತು ವರ್ಷದ ಫ್ರೆಂಚ್ ಮಹಿಳೆಯೊಬ್ಬರನ್ನು ವಾರಣಾಸಿಯಲ್ಲಿ ಕಳೆದ ರಾತ್ರಿ ಆಕೆ ವಾಸವಾಗಿರುವ ಬಾಡಿಗೆ ನಿವಾಸದ ಕಾವಲುಗಾರನೇ ಅತ್ಯಾಚಾರಗೈದ ಘಟನೆ ವರದಿಯಾಗಿದೆ. 1977ರಿಂದ ವಾರಣಾಸಿಗೆ ನಿಯಮಿತವಾಗಿ ಭೇಟಿ ನೀಡುತ್ತಿರುವ ಫ್ರೆಂಚ್ ಮಹಿಳೆ ಕಳೆದ 11 ತಿಂಗಳುಗಳಿಂದ ವಿಶೇಷ ಸಾಮರ್ಥ್ಯದ ಮಕ್ಕಳ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಕಳೆದ ರಾತ್ರಿ ಆಕೆಯ ರೊಹನಿಯಾ ಪ್ರದೇಶದಲ್ಲಿರುವ ನಿವಾಸದ ಕಾವಲುಗಾರ ಆಕೆಯ ಕೈಯ್ಯಲ್ಲಿದ್ದ ಮೊಬೈಲ್ ಫೋನ್ ಸೆಳೆದು ಆಕೆಯ ಮೇಲೆ ಹಲ್ಲೆಗೈದು ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾನೆ.

ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆಕೆಯ ಸ್ಥಿತಿ ಸ್ಥಿರವಾಗಿದ್ದು ಆಕೆ ಅಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕಾವಲುಗಾರನಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News