ಕೇರಳ: ಟೊಮೆಟೊ ಕಿಲೊಗೆ 60ರೂ. !

Update: 2017-06-29 10:57 GMT

ಕ್ಯಾಲಿಕಟ್, ಜೂ. 29: ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಕಿಲೊ ಒಂದಕ್ಕೆ 50 ರೂಪಾಯಿಯಿಂದ 70 ರೂಪಾಯಿವರೆಗೂ ಮಾರುಕಟ್ಟೆಯಲ್ಲಿ ಟೊಮೆಟೊ ಮಾರಾಟವಾಗುತ್ತಿದೆ. ಕ್ಯಾಲಿಕಟ್ ನಲ್ಲಿ ಕಿಲೋ ಒಂದಕ್ಕೆ ಚಿಲ್ಲರೆ ಮಾರುಕಟ್ಟೆಯಲ್ಲಿ 50ರಿಂದ ಅರುವತ್ತು ರೂಪಾಯಿಗೆ ಟೊಮೆಟೊ ಮಾರಲಾಗುತ್ತಿದೆ. ಆದರೆ ಮೆಟ್ರೊನಗರಗಳಲ್ಲಿ 60ರಿಂದ 70ರೂಪಾಯಿ ಟೊಮೆಟೊ ಬೆಲೆಯಿದೆ.

ಕೊಲ್ಕತಾದಲ್ಲಿ 50ರೂ. ಚೆನ್ನೈಯಲ್ಲಿ 40ರಿಂದ 45ರೂಪಾಯಿ ಮುಂಬೈಯಲ್ಲಿ 40ರೂಪಾಯಿಗೆ ಒಂದು ಕಿಲೋ ಟೊಮೆಟೊ ಮಾರಾಟವಾಗುತ್ತಿದೆ.

ದಿಲ್ಲಿಯಲ್ಲಿ ಆನ್‌ಲೈನ್ ಮಾರುಕಟ್ಟೆಯಲ್ಲಿ 45ರೂಪಾಯಿಯಿಂದ 48ರೂಪಾಯಿವರೆಗೂ ಒಂದು ಕಿಲೋ ಟೊಮೆಟೊ ದರವಾಗಿದೆ. ಮದರ್ ಡೈರಿಯ ಸಫಲ್ ಔಟ್‌ಲೆಟ್‌ನಲ್ಲಿ ಒಂದು ಕಿಲೋ ಟೊಮೆಟೊ ಬೆಲೆ 60ರೂಪಾಯಿಯಾಗಿದೆ. ಕೃಷಿ ನಾಶದಿಂದಾಗಿ ಟೊಮೆಟೊಕ್ಕೆ ಬೆಲೆಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News