200 ರೂ. ನೋಟು ಮುದ್ರಣ ಆರಂಭ

Update: 2017-06-29 11:06 GMT

ಮುಂಬೈ, ಜೂ. 29: ರಿಸರ್ವ್ ಬ್ಯಾಂಕ್ 200ರೂಪಾಯಿ ಮುಖಬೆಲೆಯ ನೋಟನ್ನು ಮುದ್ರಿಸಲು ಆರಂಭಿಸಿದೆ. ಕಡಿಮೆ ಮೌಲ್ಯದ ನೋಟುಗಳ ಅಭಾವವನ್ನು ಪರಿಹರಿಸಲಿಕ್ಕಾಗಿ 200ರೂಪಾಯಿ ನೋಟು ಮುದ್ರಣಕ್ಕೆ ಆರ್‌ಬಿಐ ಮುಂದಾಗಿದೆ.

ಹೊಸ 200ರೂಪಾಯಿ ಮುದ್ರಣಕ್ಕೆ ಮಾರ್ಚ್‌ನಲ್ಲಿ ನಡೆದಿದ್ದ ಆರ್‌ಬಿಐ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಆದರೆ ಹೊಸ ನೋಟು ಮುದ್ರಣ ಆರಂಭಿಸಿದ ಕುರಿತು ವಿವರವನ್ನು ರಿಸರ್ವ್ ಬ್ಯಾಂಕ್ ಈ ವರೆಗೆ ಔಪಚಾರಿಕವಾಗಿ ಪ್ರಕಟಿಸಿಲ್ಲ.

ಇದಕ್ಕೆ ಸಂಬಂಧಿಸಿದ ಇಮೇಲ್‌ಗೂ ಅದು ಉತ್ತರಿಸಿಲ್ಲ. ಹಳೆಯ 500ರೂಪಾಯಿ, 1000ರೂಪಾಯಿ ನೋಟುಗಳನ್ನು ಕೇಂದ್ರಸರಕಾರ ಕಳೆದವರ್ಷ ನವೆಂಬರ್ ಎಂಟಕ್ಕೆ ಅಮಾನ್ಯ ಗೊಳಿಸಿತ್ತು. ಆನಂತರ ಹೊಸ ಐನೂರು ರೂಪಾಯಿ ನೋಟು ಮತ್ತು 2000ರೂಪಾಯಿ ನೋಟುಗಳನ್ನು ಬಿಡುಗಡೆಗೊಳಿಸಿತ್ತು.

2000ರೂಪಾಯಿನೋಟು ಉಪಯೋಗಿಸಿ ವ್ಯವಹಾರ ಕಷ್ಟವಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ 200ರೂಪಾಯಿ ನೋಟುಗಳನ್ನು ಮುದ್ರಿಸಲು ಆರ್‌ಬಿಐ ಸಜ್ಜಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News