ಮನವೊಲಿಕೆ ಯಾರದು?

Update: 2017-07-02 18:23 GMT

ಮಾನ್ಯರೆ,

ಮಠದಲ್ಲಿ ನಮಾಝ್ ನಡೆದ ಕಾರಣದಿಂದ ಮಠದ ಆವರಣ ಅಪವಿತ್ರಗೊಂಡಿದೆ. ಹೀಗಾಗಿ ಗೋಮೂತ್ರ ಸಿಂಪಡಿಸಿ ಅದನ್ನು ಶುದ್ಧಿಗೊಳಿಸಬೇಕು ಎಂದು ಪೇಜಾವರ ತೀರ್ಥರ ಶಿಷ್ಯರೇ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಾ ಪೇಜಾವರ ತೀರ್ಥರು, ಇಲ್ಲ ಇಲ್ಲ ಮಠದ ಒಳಗೆ ನಮಾಝ್ ನಡೆದಿಲ್ಲ; ನಡೆದಿರುವುದು ಹೊರಾಂಗಣದಲ್ಲಿ ಮಾತ್ರ ಎಂದು ಸಮಜಾಯಿಷಿ ನೀಡುತ್ತಾರೆ! ಪವಿತ್ರ ಅಪವಿತ್ರ, ಶುದ್ಧಿ ಅಶುದ್ಧಿ, ಶ್ರೇಷ್ಠ ಕನಿಷ್ಠ... ಇಂತಹ ಮಾನಸಿಕ ಕಲ್ಮಶಗಳಿಂದ ಮುಕ್ತಿ ಹೊಂದದೆ ನಡೆಸಲಾಗುವ ಸುಧಾರಣೆಯ ಪ್ರಹಸನ ವ್ಯರ್ಥ ಎಂದು ಇತಿಹಾಸವೇ ಹೇಳುತ್ತ್ತದೆ.
ಗೋಮಾಂಸ ತಿನ್ನುವವರ ಮನವೊಲಿಸಬೇಕು ಎಂದು ತೀರ್ಥರು ಹೇಳುತ್ತಾರೆ. ಮನವೊಲಿಕೆ ಬೇಕಾಗಿರುವುದು ಪ್ರಾಣಿಯ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವವರಿಗೆ... ಅಂದರೆ ಅಪರಾಧಿಗಳಿಗೆ.. ಎಲ್ಲಾ ಧರ್ಮದ ಮೂಲಭೂತವಾದಿಗಳಿಗೆ ಹಾಗೂ ಇಂಥಹ ಅಮಾನವೀಯ ಸಮೂಹಸನ್ನಿಯನ್ನು ಸೃಷ್ಟಿಸಿರುವ ಒಂದು ಚಿಂತನಾಕ್ರಮಕ್ಕೆ ಮನವೊಲಿಕೆಯ ಅಗತ್ಯವಿದೆಯೇ ಹೊರತು ಗೋವನ್ನು ತಿನ್ನುವವರಿಗಲ್ಲ...
 

Writer - -ವೆಂಕಟೇಶ್, ಬೆಂಗಳೂರು

contributor

Editor - -ವೆಂಕಟೇಶ್, ಬೆಂಗಳೂರು

contributor

Similar News