ಸೆಕ್ಷನ್‌ಗಿರುವ ಗೌರವ ಮರೀಚಿಕೆಯಾಗುತ್ತಿದೆಯೇ?

Update: 2017-07-09 18:22 GMT

ಮಾನ್ಯರೆ,

 ಈ ಹಿಂದೆ ಜಿಲ್ಲೆ ಅಥವಾ ತಾಲೂಕು ದಂಡಾಧಿಕಾ ರಿಗಳು ನಾಡಿನಾದ್ಯಂತ ಸೆಕ್ಷನ್ 144 ಜಾರಿಗೊಳಿಸಿದ್ದಲ್ಲಿ ಜನರು ಭಯ ಭೀತರಾಗಿರುತ್ತಿದ್ದರು. ಗಿರಾಕಿಗಳಿಲ್ಲದೆ ವ್ಯಾಪಾರ ವಹಿವಾಟುಗಳಿಲ್ಲದೆ ಬಜಾರುಗಳು ಭಣಗುಡುತ್ತಿದ್ದವು. ಕಾನೂನನ್ನು ಗೌರವಿಸಿ ಜನರು ಗುಂಪು ಸೇರುತ್ತಿರಲಿಲ್ಲ. ಶುಭ ಕಾರ್ಯವಿದ್ದರೂ ಈ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸುತ್ತಿದ್ದರು. ಒಂದು ರೀತಿಯಲ್ಲಿ ಪೊಲೀಸ್ ಪಡೆ ಮತ್ತು ಅವರ ಕೈಯಲ್ಲಿರುವ ಅಸ್ತ್ರಗಳು ಜನರನ್ನು ಜಾಗೃತರಾಗಿರುವಂತೆ ಎಚ್ಚರಿಸುವಂತಿತ್ತು.

ಆದರೆ ದ.ಕ. ಜಿಲ್ಲೆಯಾದ್ಯಂತ ಕಳೆದ ಒಂದೂವರೆ ತಿಂಗಳಿಂದ ಸೆಕ್ಷನ್ 144 ಜಾರಿಯಿದ್ದರೂ ಕಳೆದ ಜುಲೈ 7ರಂದು ಜನ ಸಾಮಾನ್ಯರಿಗೆ ಬಹುದೊಡ್ಡ ಆಶ್ಚರ್ಯ ಎದುರಾಗಿತ್ತು. ಸೆಕ್ಷನ್ ಜಾರಿ ಇರುವ ಪ್ರದೇಶದಲ್ಲಿಯೇ ಒಂದೆಡೆ ರಾಜಕೀಯ ಪಕ್ಷದ ಸಮಾವೇಶ ನಡೆದರೆ ಮತ್ತೊಂದೆಡೆ ಸಂಘಟನೆಯೊಂದು ಅನುಮತಿಯಿಲ್ಲದೆಯೇ ಪ್ರತಿಭಟನೆ ನಡೆಸಿ ಸೆಕ್ಷನ್ ಬಗ್ಗೆ ಜನರಿಗಿರುವ ಭಯವನ್ನು ಹೋಗಲಾಡಿಸುವಂತೆ ಮಾಡಿತು. ಪ್ರತಿಭಟನೆಗೈದ ಜನಪ್ರತಿನಿಧಿಗಳನ್ನು ಜಿಲ್ಲಾಡಳಿತವು ಸೆರೆ ಹಿಡಿದಂತೆ ನಾಟಕವಾಡಿ ಕ್ಷಣಾರ್ಧದಲ್ಲೇ ಬಿಡುಗಡೆ ಮಾಡಿತು. ಈ ರೀತಿಯಾದರೆ ಮುಂದೆ ಜನಸಾಮಾನ್ಯರು ಕೂಡಾ ಸೆಕ್ಷನ್ 144ಕ್ಕೆೆ ಗೌರವ ನೀಡದೆ ಪ್ರತಿಭಟನೆ, ಸಮಾವೇಶಗಳನ್ನು ನಡೆಸಿ ಕಾನೂನು ಕೈಗೆತ್ತಿಕೊಳ್ಳಲು ಮುಂದಾದರೂ ಅಚ್ಚರಿಯಿಲ್ಲ....
 

Writer - ಖಾದರ್ ಕೆನರಾ, ಪುತ್ತೂರು

contributor

Editor - ಖಾದರ್ ಕೆನರಾ, ಪುತ್ತೂರು

contributor

Similar News