×
Ad

ಮೊಯಿನ್ ಅಲಿ ಸ್ಪಿನ್ ಮ್ಯಾಜಿಕ್: ದಕ್ಷಿಣ ಆಫ್ರಿಕಕ್ಕೆ ಹೀನಾಯ ಸೋಲು

Update: 2017-07-10 23:59 IST

ಲಂಡನ್, ಜು.10: ಮೊಯಿನ್ ಅಲಿ ಸ್ಪಿನ್ ಮೋಡಿೆ ಕಂಗಾಲಾದ ದಕ್ಷಿಣ ಆಫ್ರಿಕ ತಂಡ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 211 ರನ್‌ಗಳಿಂದ ಸೋಲುಂಡಿದೆ.

ನಾಲ್ಕನೆ ದಿನವಾದ ರವಿವಾರ ಮೊದಲ ಟೆಸ್ಟ್ ಪಂದ್ಯ ದಲ್ಲಿ ಗೆಲುವಿಗೆ 331 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕ ತಂಡ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 119 ರನ್‌ಗೆ ಆಲೌಟಾಯಿತು. ಭರ್ಜರಿ ಜಯ ಸಾಧಿಸಿರುವ ಆಂಗ್ಲರು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ನಾಯಕನಾಗಿ ಜೋ ರೂಟ್‌ಗೆ ಇದು ಮೊದಲ ಗೆಲುವಾಗಿದೆ. ಇದರೊಂದಿಗೆ ಇಂಗ್ಲೆಂಡ್ ತಂಡ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ 1960ರ ಬಳಿಕ ದಕ್ಷಿಣ ಆಫ್ರಿಕದ ವಿರುದ್ಧ ಮೊದಲ ಗೆಲುವು ದಾಖಲಿಸಿದೆ.

ಇಂಗ್ಲೆಂಡ್‌ನ ಪರ ಸ್ಪಿನ್ನರ್ ಮೊಯಿನ್ ಅಲಿ 53ಕ್ಕೆ 6 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದ ಅಲಿ ಮೊದಲ ಇನಿಂಗ್ಸ್‌ನಲ್ಲಿ ಅಮೂಲ್ಯ 87 ರನ್ ಕೊಡುಗೆ ನೀಡಿದ್ದರು.

4ನೆ ದಿನದಾಟದಲ್ಲಿ ಲಾರ್ಡ್ಸ್ ಪಿಚ್ ಹೆಚ್ಚು ಟರ್ನ್ ಹಾಗೂ ಬೌನ್ಸ್ ಆಗುತ್ತಿತ್ತು. ಇದರ ಲಾಭ ಪಡೆದ ಅಲಿ ಹರಿಣ ಪಡೆಯ ಹೆಡೆಮುರಿ ಕಟ್ಟಿದರು.
ಇಂಗ್ಲೆಂಡ್ ತಂಡವನ್ನು ದ್ವಿತೀಯ ಇನಿಂಗ್ಸ್‌ನಲ್ಲಿ 233 ರನ್‌ಗೆ ನಿಯಂತ್ರಿಸಿದ್ದ ದಕ್ಷಿಣ ಆಫ್ರಿಕ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿತ್ತು. 12 ರನ್ ಗಳಿಸುವಷ್ಟರಲ್ಲಿ ಹೆನೊ ಕುನ್(9) ಹಾಗೂ ನಾಯಕ ಡಿಯನ್ ಎಲ್ಗರ್(1) ವಿಕೆಟ್ ಒಪ್ಪಿಸಿದರು. ಜೆಪಿ ಡುಮಿನಿ ಅಲ್ಪ ಮೊತ್ತಕ್ಕೆ ಔಟಾದರು. ಹಾಶಿಮ್ ಅಮ್ಲ ಲಿಯಾಮ್ ಡಾಸನ್‌ಗೆ ಎಲ್ಬಿಡಬ್ಲುಗೆ ಒಳಗಾದಾಗ ದಕ್ಷಿಣ ಆಫ್ರಿಕದ ಹೋರಾಟ ಬಹುತೇಕ ಅಂತ್ಯಕಂಡಿತು.

ಇದಕ್ಕೆ ಮೊದಲು 1 ವಿಕೆಟ್ ನಷ್ಟಕ್ಕೆ 119 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡ ಬೈರ್‌ಸ್ಟೋವ್(51) ಸಾಹಸದ ನೆರವಿನಿಂದ 233 ರನ್ ಗಳಿಸಿತು. ಕೇಶವ್ ಮಹಾರಾಜ್ 4 ವಿಕೆಟ್ ಹಾಗೂ ಮೊರ್ಕೆಲ್ 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

*ಇಂಗ್ಲೆಂಡ್‌ಪ್ರಥಮಇನಿಂಗ್ಸ್: 458
*ಇಂಗ್ಲೆಂಡ್‌ದ್ವಿತೀಯಇನಿಂಗ್ಸ್: 233
*ದಕ್ಷಿಣ ಆಫ್ರಿಕಮೊದಲಇನಿಂಗ್ಸ್: 361
*ದಕ್ಷಿಣ ಆಫ್ರಿಕಎರಡನೆಇನಿಂಗ್ಸ್: 119/10
 (ಬವುಮಾ21, ಫಿಲ್ಯಾಂಡರ್‌ಅಜೇಯ19,
ಅಲಿ6-53, ಡಾಸನ್2-34)

*ಪಂದ್ಯಶ್ರೇಷ್ಠ: ಮೊಯಿನ್‌ಅಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News