ಸಮುದ್ರದ ಜೊತೆ ಸರಸ: ಎಚ್ಚರಿಕೆಯಿರಲಿ
Update: 2017-07-11 23:49 IST
ಮಾನ್ಯರೆ,
ಇತ್ತೀಚೆಗೆ ಮೊಬೈಲ್ ಸೆಲ್ಫಿ ಕ್ರೇಜ್‌ನಿಂದಾಗಿ ಸಮುದ್ರದಲ್ಲಿ ಹಲವಾರು ಯುವಜನರು ಬಲಿಯಾಗುತ್ತಿದ್ದು ದಿನದಿಂದ ದಿನಕ್ಕೆ ಇಂತಹ ಸುದ್ದಿಗಳು ಹೆಚ್ಚಾಗುತ್ತಿವೆ.
ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿರುತ್ತದೆ. ಆದರೆ ಸಮುದ್ರದ ಏರಿಳಿತದ ಬಗ್ಗೆ ಅರಿವಿರದ ಮೋಜಿನ ಯುವಕರು ಮೊಬೈಲ್‌ನಿಂದ ಫೋಟೊ, ವೀಡಿಯೊ ಮಾಡಿಸಿಕೊಳ್ಳಲು ಸಮುದ್ರಕ್ಕಿಳಿದು ಆಟವಾಡುವಾಗ ಅಪಾಯಕಾರಿ ತೆರೆಗಳಿಗೆ ಬಲಿಯಾಗುತ್ತಿದ್ದಾರೆ.
ಇಂತಹ ಯುವಜನರಿಗೆ ಸಮುದ್ರಕ್ಕಿಳಿಯಬೇಡಿ ಎಂದು ಕೆಲವೆಡೆ ಸ್ಥಳೀಯರು ಎಚ್ಚರಿಸುತ್ತಿದ್ದರೂ ಅವರ ಮಾತನ್ನು ಧಿಕ್ಕರಿಸಿ ತಾವೇ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಇನ್ನಾದರೂ ಯುವಜನತೆ ಸೆಲ್ಫಿ ಕ್ರೇಜ್‌ಗಾಗಿ ಸಮುದ್ರದ ಜೊತೆ ಸರಸವಾಡುವಾಗ ಎಚ್ಚರಿಕೆ ವಹಿಸಬೇಕಾಗಿದೆ.