×
Ad

ಮಲ್ಯನನ್ನು ಹಾಜರುಪಡಿಸಿದಾಗ ಶಿಕ್ಷೆ ಪ್ರಮಾಣ ಪ್ರಕಟ: ಸುಪ್ರೀಂ

Update: 2017-07-14 22:11 IST

ಹೊಸದಿಲ್ಲಿ, ಜು. 14: ಲಂಡನ್‌ನಲ್ಲಿ ಮಲ್ಯನ ಗಡಿಪಾರು ಪ್ರಕ್ರಿಯೆ ನಡೆಯುತ್ತಿದೆ ಎಂಬ ಕೇಂದ್ರದ ಪ್ರತಿಪಾದನೆಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಆತನನ್ನು ಹಾಜರುಪಡಿಸಿದ ಬಳಿಕ ನ್ಯಾಯಾಂಗ ನಿಂದನೆ ಪ್ರಕರಣ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದೆ.ಎ.ಎಕೆ. ಗೋಯಲ್ ಹಾಗೂ ಯು.ಯು ಲಲಿತ್ ಅವರನ್ನೊಳಗೊಂಡ ನ್ಯಾಯಾಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಲ್ಯನ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಕುರಿತು ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಬೇಕಿತ್ತು. ಆದರೆ, ಮಲ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಡಿಸೆಂಬರ್ 4ರ ಒಳಗೆ ಮಲ್ಯನ ಹಸ್ತಾಂತರ ವಿಚಾರಣೆ ಅಂತ್ಯಗೊಳ್ಳಲಿದೆ ಎಂದು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ.ಈ ಹಿಂದೆ ಮಲ್ಯ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲನಾಗಿದ್ದ.

ದೇಶ-ವಿದೇಶಗಳಲ್ಲಿ ಹೊಂದಿರುವ ಆಸ್ತಿ ವಿವರಗಳ ಬಗ್ಗೆ ವಿವರ ಸಲ್ಲಿಸಲು ಹಾಗೂ ಕೋರ್ಟ್‌ಗೆ ಹಾಜರಾಗಲು ವಿಫಲವಾದ ಮಲ್ಯನ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News