ಇನ್ನು ಮುಂದೆ ಅನಿವಾಸಿಗಳು ತೆರಿಗೆ ತಪ್ಪಿಸುವಂತಿಲ್ಲ
Update: 2017-07-14 22:35 IST
ಮುಂಬೈ, ಜು. 14: ಇನ್ನು ಮುಂದೆ ಅನಿವಾಸಿ ಭಾರತೀಯರು ವಿದೇಶ ಬ್ಯಾಂಕ್‌ಗಳಲ್ಲಿ ಜಮೆ ಮಾಡಿರುವ ಹಣ ಆದಾಯ ತೆರಿಗೆ ವ್ಯಾಪ್ತಿಗೆ ಬರಲಿದೆ.
ಕಳೆದ ಕೆಲವು ವರ್ಷಗಳಿಂದ ಪ್ರತಿವರ್ಷ ಭಾರತೀಯರು 182 ದಿನಗಳ ಕಾಲ ವಿದೇಶದಲ್ಲಿ ನೆಲೆಸಿ ಅನಿವಾಸಿ ಭಾರತೀಯರು ಎಂದು ಘೋಷಿಸಿಕೊಳ್ಳುತ್ತಿದ್ದರು ಹಾಗೂ ಅಲ್ಲಿನ ಬ್ಯಾಂಕ್‌ಗಳಲ್ಲಿ ಹಣ ಜಮೆ ಮಾಡುತ್ತಿದ್ದರು. ಈ ಮೂಲಕ ತಮ್ಮ ಹಣವನ್ನು ನ್ಯಾಯಬದ್ದಗೊಳಿಸುತ್ತಿದ್ದರು ಹಾಗೂ ತೆರಿಗೆ ವಂಚಿಸುತ್ತಿದ್ದರು.
ವಿದೇಶದಲ್ಲಿ ಕಾನೂನುಬದ್ದವಾಗಿ ಗಳಿಸಿದ ಹಣವನ್ನು ವಿದೇಶದ ಬ್ಯಾಂಕ್‌ಗಳಲ್ಲಿ ಇರಿಸಲು ಅನಿವಾಸಿ ಭಾರತೀಯರಿಗೆ ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ಇದು ಸಾಧ್ಯವಿಲ್ಲ.
ವಿದೇಶದಲ್ಲಿ ಇರುವ ಬ್ಯಾಂಕ್ ಖಾತೆ ವಿವರವನ್ನು ಅನಿವಾಸಿ ಭಾರತೀಯರು ಬಹಿರಂಗಗೊಳಿಸಲು ತೆರಿಗೆ ಪಾವತಿ ಮಾದರಿಯಲ್ಲಿ ಹೊಸ ನಿಯಮವನ್ನು ಆದಾಯ ತೆರಿಗೆ ಇಲಾಖೆ ಕೆಲವು ದಿನಗಳ ಹಿಂದೆ ಸೇರಿಸಿದೆ.