ರೈತರ ಹೋರಾಟಕ್ಕೆ ನ್ಯಾಯ ದೊರಕಿಸಿ

Update: 2017-07-19 18:25 GMT

ಮಾನ್ಯರೆ,

ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ನಡುವೆ ವಿವಾದದಲ್ಲಿರುವ ಮಹಾದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಇತ್ಯರ್ಥಗೊಳಿಸಿ ಮಲಪ್ರಭಾ ನದಿಗೆ ಜೋಡಣೆ ಮಾಡಬೇಕೆಂಬುದು ಉತ್ತರ ಕರ್ನಾಟಕ ರೈತರ ಬಹು ವರ್ಷಗಳ ಬೇಡಿಕೆಯಾಗಿದೆ. ಈ ರೈತರ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಲು ಇಡೀ ರಾಜ್ಯದ ಮಠಾಧೀಶರು, ಕನ್ನಡ ಚಲನಚಿತ್ರ ಕಲಾವಿದರು, ಸಂಘ ಸಂಸ್ಥೆಗಳು, ಹಾಗೂ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದರು. ಆದರೆ ಯಾವುದೇ ರೀತಿಯ ಉಪಯೋಗವಾಗಲಿಲ್ಲ. ಸರಕಾರ ಮತ್ತು ವಿರೋಧ ಪಕ್ಷಗಳು ಕೇಂದ್ರದ ಮೇಲೆ ಒತ್ತಡ ಹೇರಲು ಧೈರ್ಯ ತೋರಲಿಲ್ಲ. ಇದರ ಪರಿಣಾಮವಾಗಿ ಈಗ ನರಗುಂದದಲ್ಲಿ ರೈತರು ಮಾಡುತ್ತಿರುವ ಹೋರಾಟ ಮೂರನೆ ವರ್ಷಕ್ಕೆ ಕಾಲಿರಿ ಸಿದೆ. ಆದರೆ ಈ ರೈತರ ಸಮಸ್ಯೆಗಳಿಗೆ ಯಾವೊಬ್ಬ ಜನಪ್ರತಿನಿಧಿಯೂ ಸ್ಪಂದನೆ ನೀಡದಿರುವುದು ನಿಜಕ್ಕೂ ನೋವಿನ ಸಂಗತಿ.

ಈಗಾಗಲೇ ಸತತ ಎರಡು ವರ್ಷಗಳಿಂದ ಮಳೆ ಇಲ್ಲದೆ ರೈತರು ಬೆಳೆ ಬೆಳೆಯಲಾಗದೆ ಕಂಗೆಟ್ಟು ಹೋಗಿದ್ದಾರೆ. ಈ ವರ್ಷವೂ ಕೂಡಾ ಶೇ.24ರಷ್ಟು ಮಳೆ ಕೊರತೆ ಎದುರಾಗುವ ಸಂಭವ ಇರುವುದರಿಂದ ರೈತರಿಗೆ ಮತ್ತೆ ಕಣ್ಣೀರಿನ ನರಕಯಾತನೆ ತಪ್ಪಿದ್ದಲ್ಲ. ಆದ್ದರಿಂದ ಜನಪ್ರತಿನಿಧಿಗಳೆನಿಸಿಕೊಂಡವರು ಈ ಅನ್ನದಾತರ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಇನ್ನಾದರೂ ಪಕ್ಷ ಭೇದ ಮರೆತು ರಾಜ್ಯದ ಎಲ್ಲಾ ಶಾಸಕರು, ಸಚಿವರು ಮತ್ತು ಸಂಸದರು ಒಂದಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ಮುಗ್ಧ ರೈತರಿಗೆ ನ್ಯಾಯ ಒದಗಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕಾಗಿದೆ.

-ಮೌಲಾಲಿ ಕೆ. ಬೋರಗಿ, ಸಿಂದಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News