ಪಠ್ಯಪುಸ್ತಕಗಳನ್ನು ಒದಗಿಸಿ
Update: 2017-07-19 23:58 IST
ಮಾನ್ಯರೆ,
ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ (ಬಿ.ಎ.) ಅಗತ್ಯವಾಗಿ ಬೇಕಿರುವ ಭಾಷಾಪಠ್ಯ ಪುಸ್ತಕಗಳು ದೊರೆಯದಿರುವುದು ವಿಷಾದನೀಯ.
ಪಠ್ಯಗಳಿಲ್ಲದೆ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಯಾಗುತ್ತಿದೆ. ಕಳೆದ ವರ್ಷವೂ ವಿದ್ಯಾರ್ಥಿಗಳಿಗೆ ಇದೇ ಪರಿಸ್ಥಿತಿಯಿತ್ತು. ವಿಶ್ವವಿದ್ಯಾನಿಲಯವು ಇನ್ನಾದರೂ ಈ ಸಮಸ್ಯೆಯ ಬಗ್ಗೆ ಸರಿಯಾಗಿ ಗಮನ ಹರಿಸುವುದರ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳನ್ನು ಈ ಕೂಡಲೇ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಪ್ರವೃತ್ತವಾಗಬೇಕಿದೆ.
-ಲಕ್ಷ್ಮಿಶ್ರೀ.ಸಿ. ಪತ್ರಿಕೋದ್ಯಮ ವಿದ್ಯಾರ್ಥಿನಿ, ತುಮಕೂರು