ಅತ್ಯಾಚಾರ ಆರೋಪದಲ್ಲಿ ಕಾಂಗ್ರೆಸ್ ಶಾಸಕ ವಿನ್ಸೆಂಟ್ ಬಂಧನ
Update: 2017-07-22 18:37 IST
ತಿರುವನಂತಪುರಂ, ಜು.22: ಮಹಿಳೆಯೊಬ್ಬರನ್ನು ಅತ್ಯಾಚಾರಗೈದ ಆರೋಪದಲ್ಲಿ ಕಾಂಗ್ರೆಸ್ ಶಾಸಕ ಎಂ.ವಿನ್ಸೆಂಟ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಶಾಸಕರನ್ನು ಬಂಧಿಸಲು ನಮಗೆ ಅಸೆಂಬ್ಲಿ ಸ್ಪೀಕರ್ ರ ಅನುಮತಿ ಬೇಕು. ನಮಗೀಗ ಅವರನ್ನು ವಿಚಾರಣೆ ನಡೆಸಲು ಮಾತ್ರ ಸಾಧ್ಯವಾಗಲಿದೆ. ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತನ್ನ ಮೇಲೆ ಶಾಸಕ ವಿನ್ಸೆಂಟ್ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದ 51 ವರ್ಷದ ಮಹಿಳೆ ಆತ್ಮಹತ್ಯೆಗೂ ಯತ್ನಿಸಿದ್ದರು. ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ವಿನ್ಸೆಂಟ್ ವಿರುದ್ಧ ಅತ್ಯಾಚಾರ, ಆತ್ಮಹತ್ಯೆಗೆ ಪ್ರೇರಣೆ ಪ್ರಕರಣ ದಾಖಲಿಸಲಾಗಿತ್ತು.