×
Ad

ಭಾರತಕ್ಕೆ ಮಿಗ್-35 ಮಾರಲು ರಶ್ಯ ಉತ್ಸುಕ

Update: 2017-07-23 23:31 IST

ಹೊಸದಿಲ್ಲಿ, ಜು. 22: ನೂತನ ಯುದ್ಧ ವಿಮಾನ ಮಿಗ್-35 ಅನ್ನು ಭಾರತಕ್ಕೆ ಮಾರಲು ರಶ್ಯ ಉತ್ಸುಕವಾಗಿದೆ ಎಂದು ಮಿಗ್ ಏರ್‌ಕ್ರಾಪ್ಟ್ ಕಾರ್ಪೊರೇಶನ್ ಮುಖ್ಯ ಕಾರ್ಯಕಾರಿ ಅಧಿಕಾರಿ ಇಲ್ಯಾ ತರೆಸೆಂಕೊ ತಿಳಿಸಿದ್ದಾರೆ.

 ಜನವರಿಯಲ್ಲಿ ಮಿಗ್-35 ಅನ್ನು ಪ್ರಸ್ತುತಪಡಿಸಿದ ಬಳಿಕ, ಮಿಗ್ ಕಾರ್ಪೋರೇಶನಈ ವಿಮಾನವನ್ನು ಭಾರತ ಹಾಗೂ ಜಗತ್ತಿನ ಇತರ ಭಾಗಗಳಿಗೆ ಮಾರಾಟ ಮಾಡಲು ಆರಂಭಿಸಲಿದೆ ಎಂದು ಅವರು ಹೇಳಿದರು.

ಭಾರತದ ಟೆಂಡರ್‌ಗೆ ನಾವು ವಿಮಾನಗಳನ್ನು ಪೂರೈಸುತ್ತೇವೆ ಎಂದು ಪ್ರಸ್ತಾಪಿಸಿದ್ದೇವೆ. ಟೆಂಡರ್‌ನಲ್ಲಿ ಜಯಗಳಿಸಲು ನಾವು ಭಾರತದ ವಾಯು ಪಡೆಯೊಂದಿಗೆ ಕೆಲಸ ಮಾಡಲಿದ್ದೇವೆ ಎಂದು ಅವರು ಇಲ್ಲಿ ನಡೆದ ಮ್ಯಾಕ್ಸ್ 2017 ವೈಮಾನಿಕ ಪ್ರದರ್ಶನದ ನೇಪಥ್ಯದಲ್ಲಿ ತಿಳಿಸಿದರು.

 ಮಿಗ್ 35 ರಶ್ಯದ ಸುಧಾರಿತ ಹಾಗೂ 4 ಪ್ಲಸ್ ತಲೆಮಾರಿನ ಯುದ್ಧ ವಿಮಾನ. ಭಾರತ ಈ ಯುದ್ಧ ವಿಮಾನದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News