ವಿಶ್ವಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಅವಕಾಶ ನಿರಾಕರಣೆ: ಹೈಕೋರ್ಟಿನ ಮೊರೆಹೋದ ಪಿಯು ಚಿತ್ರಾ
ಹೊಸದಿಲ್ಲಿ,ಜು.25: ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ತಂಡದಿಂದ ತನ್ನನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಕೇರಳದ ಓಟಗಾರ್ತಿ ಪಿ.ಯು.ಚಿತ್ರಾ ಹೈಕೋರ್ಟಿನ ಮೊರೆಹೋಗಿದ್ದಾರೆ. ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಪಡೆದವರು ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಆದರೆ ಭಾರತದ 24 ಮಂದಿಯ ತಂಡದಿಂದ ತನ್ನನ್ನು ಕೈಬಿಡಲಾಗಿದೆ. ತರಬೇತಿಯ ಕೊನೆಯ ಘಟ್ಟದಲ್ಲಿ ಚಿತ್ರಾರನ್ನು ಕೈಬಿಟ್ಟಿರುವುದಾಗಿ ಅಥ್ಲೆಟಿಕ್ಸ್ ಫೆಡರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.
ಪದಕ ಸಾಧ್ಯತೆ ಕಡಿಮೆ ಇರುವುದು ತಮ್ಮಕ್ರಮಕ್ಕೆ ಕಾರಣವೆಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇವರ ಕ್ರಮದ ವಿರುದ್ಧ ಭಾರೀ ಆಕ್ರೋಶ ಸೃಷ್ಟಿಯಾಗಿದೆ.
ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುವ ಬಗ್ಗೆ ನಿರೀಕ್ಷೆಯಿಂದ ಇದ್ದೆ. ಆದರೆ ತನ್ನನ್ನು ಯಾಕೆ ಕೈಬಿಡಲಾಗಿದೆ ಎಂದು ತಿಳಿಸಿಲ್ಲ ಎಂದು ಚಿತ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಅಥ್ಲೆಟಿಕ್ ಫಡರೇಶನ್ ಚಿತ್ರಾರನ್ನು ಹೊರಗಿಟ್ಟದು ಸರಿಯಲ್ಲ ಎಂದು ಚಿತ್ರಾರ ಕೋಚ್ ಎನ್.ಎಸ್. ಸಿಜಿನ್ ಹೇಳಿದರು. ಕಮಿಟಿಯು ಚಿತ್ರಾರಿಗೆ ಮೋಸ ಮಾಡಿದೆ ಎಂದಿದ್ದಾರೆ.
ಚಿತ್ರಾರನ್ನು ತಂಡದಿಂದ ಕೈಬಿಟ್ಟ ಕ್ರಮ ಸರಿಯಲ್ಲ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.ಅಧಿಕಾರಿಗಳಿಗೆ ಹೋಗಲು ಚಿತ್ರರನ್ನು ಕೈಬಿಡಲಾಗಿದ್ದರೆ ಅದನ್ನು ಒಪ್ಪಲುಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಘಟನೆಯನ್ನು ಕೇಂದ್ರ ಕ್ರೀಡಾ ಸಚಿವರ ಗಮನಕ್ಕೆ ತರಲಾಗುವುದು ಎಂದುರಾಜ್ಯ ಕ್ರೀಡಾ ಸಚಿವ ಎ.ಸಿ. ಮೊಯ್ದಿನ್ ಹೇಳಿದರು.
ಈಗ ದಿಲ್ಲಿಯಲ್ಲಿರುವ ಸಂಸದ ಎಂಬಿ ರಾಜೇಶ್ ಕೇಂದ್ರ ಕ್ರೀಡಾ ಮಂತ್ರಿಯನ್ನು ನೇರವಾಗಿ ಭೇಟಿಯಾಗಿ ಚಿತ್ರಾರ ವಿಷಯವನ್ನು ಚರ್ಚಿಸಲಿದ್ದಾರೆಂದು ಸೂಚನೆ ಲಭಿಸಿದೆ.