ನಿತೀಶ್ ಕುಮಾರ್ ಸರಕಾರ ರಚನೆ ಪಶ್ನಿಸಿ ಪಾಟ್ನಾ ಹೈಕೋರ್ಟ್‌ಲ್ಲಿ ಪಿಐಎಲ್ ವಿಚಾರಣೆ ಮುಂದೂಡಿಕೆ

Update: 2017-07-28 14:40 GMT

ಪಾಟ್ನಾ, ಜು. 28: ಬಿಹಾರದಲ್ಲಿ ನೂತನ ಜೆಡಿಯು-ಬಿಜೆಪಿ ಮೈತ್ರಿ ಸರಕಾರ ರೂಪಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಪಾಟ್ನಾ ಉಚ್ಚ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.

 ಸರಕಾರ ರಚಿಸಲು ನಿತೀಶ್ ಕುಮಾರ್ ಬಿಹಾರ ವಿಧಾನ ಸಭೆಯಲ್ಲಿ ನಿರ್ಣಾಯಕ ವಿಶ್ವಾಸ ಮತ ಕೋರುವ ಮುನ್ನ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ಎ.ಕೆ. ಉಪಾಧ್ಯಾಯ ಅವರನ್ನು ಒಳಗೊಂಡ ನ್ಯಾಯಪೀಠ ಈ ವಿಚಾರಣೆಯನ್ನು ಮುಂದೂಡಿದೆ.

   ಆರ್‌ಜೆಡಿ ಶಾಸಕ ಸರೋಜ್ ಯಾದವ್, ಚಂದನ್ ವರ್ಮಾ ಹಾಗೂ ಸಮಾಜವಾದಿ ಪಕ್ಷದ ಸದಸ್ಯ ಜಿತೇಂದ್ರ ಕುಮಾರ್ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.

ನೂತನ ಸರಕಾರ ಅಸಾಂವಿಧಾನಿಕ ಎಂದು ವ್ಯಾಖ್ಯಾನಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆ, ಅತ್ಯಧಿಕ ಸ್ಥಾನ ಹೊಂದಿರುವ ಆರ್‌ಜೆಡಿಯನ್ನು ಸರಕಾರ ರಚಿಸಲು ಮೊದಲು ಆಹ್ವಾನ ನೀಡಬೇಕು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News