ಸಾನಿಯಾ ಮಿರ್ಝಾ, ರೋಹನ್ ಬೋಪಣ್ಣಗೆ ಸೋಲು

Update: 2017-08-19 18:47 GMT

ಹೊಸದಿಲ್ಲಿ, ಆ.19: ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಝಾ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೋತು ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಒಂದು ಗಂಟೆ ಹಾಗೂ 36 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಬೋಪಣ್ಣ ಹಾಗೂ ಅವರ ಕ್ರೊಯೇಷಿಯ ಜೊತೆಗಾರ ಇವಾನ್ ಡೊಡಿಗ್ ದ್ವಿತೀಯ ಶ್ರೇಯಾಂಕದ ಝೆಕ್‌ನ ಲುಕಾಸ್ ಕುಬೊಟ್ ಹಾಗೂ ಮಾರ್ಸೆಲೊ ಮೆಲೊ ವಿರುದ್ಧ 1-6, 7-6, 7-10 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಇದೇ ವೇಳೆ ಒಂದು ಗಂಟೆ, 33 ನಿಮಿಷಗಳ ಕಾಲ ನಡೆದ ಮಹಿಳೆಯರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಸಾನಿಯಾ ಮಿರ್ಝಾ ಹಾಗೂ ಚೀನಾದ ಶುಯಿ ಪೆಂಗ್ ತೈವಾನ್‌ನ ಸೀ-ಸು-ವೀ ಹಾಗೂ ರೊಮಾನಿಯದ ಮೊನಿಕಾ ನಿಕೊಲೆಸ್ಕು ವಿರುದ್ಧ 4-6, 6-7 ಸೆಟ್‌ಗಳಿಂದ ಸೋತು ಫೈನಲ್ ಪ್ರವೇಶಿಸುವುದರಿಂದ ವಂಚಿತರಾದರು.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ರಾಮಕುಮಾರ್ ರಾಮನಾಥನ್ ಎರಡನೆ ಸುತ್ತಿನಲ್ಲಿ ಸೋತಿದ್ದರೆ, ಲಿಯಾಂಡರ್ ಪೇಸ್-ಅಲೆಕ್ಸಾಂಡರ್ ಝ್ವೆರೆವ್ ಪುರುಷರ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News