ಭಾರತದ 800 ನೆರೆ ಸಂತ್ರಸ್ತರಿಗೆ ಆಶ್ರಯ ನೀಡಿದ ಬಾಂಗ್ಲಾದೇಶ

Update: 2017-08-21 13:44 GMT

ಹೊಸದಿಲ್ಲಿ, ಆ.21: ಪಶ್ಚಿಮ ಬಂಗಾಳದ ಸುಮಾರು 800 ಮಂದಿ ನೆರೆ ಸಂತ್ರಸ್ತರು ಬಾಂಗ್ಲಾದೇಶದ ಗಡಿಜಿಲ್ಲೆ ಲಾಲ್ ಮೋನಿರ್ಹತ್ ನಲ್ಲಿ ಆಶ್ರಯ ಪಡೆದಿದ್ದಾರೆ.

ಧರ್ಲಾ ನದಿಯ ಪ್ರವಾಹದಿಂದ ಸಮಸ್ಯೆಗೊಳಗಾದ 800  ಮಂದಿ ಮುಘಲ್ ಹಟ್ ಹಾಗೂ ದುರ್ಗಾಪುರ್ ಗೆ ಬಂದಿರುವುದಾಗಿ ಮುಘಲ್ ಹಟ್ ನ ಅಧಿಕಾರಿ ಹಬೀಬುರ್ರಹ್ಮಾನ್ ದೃಢಪಡಿಸಿದ್ದಾರೆ. ಬಾಂಗ್ಲಾದೇಶದ ಗಡಿ ಪ್ರದೇಶದಲ್ಲಿರುವ ಭಾರತದ ಗ್ರಾಮಗಳ ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ. ಮಾನವೀಯತೆಯ ನೆಲೆಯಲ್ಲಿ ಅವರಿಗೆ ಬಾಂಗ್ಲಾದೇಶದಲ್ಲಿ ಆಶ್ರಯ ನೀಡಲಾಗಿದೆ ಎಂದು ಬಾಂಗ್ಲಾದೇಶ ಗಡಿ ಪಡೆ ತಿಳಿಸಿದೆ.

“ಬಾಂಗ್ಲಾದೇಶ ಗಡಿ ಪಡೆ ಸಹಾಯ ಮಾಡದಿದ್ದಲ್ಲಿ ನಾವು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದೆವು ಎನ್ನುತ್ತಾರೆ 75 ವರ್ಷದ ಬಸೀರುದ್ದೀನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News