×
Ad

ಕ್ರಿಮಿನಲ್ ದೇವ ಮಾನವರ ವಿರುದ್ಧ ನಿಗಾ ಇರಿಸಬೇಕು: ವಿ.ಎಸ್. ಅಚ್ಯುತಾನಂದನ್

Update: 2017-08-27 16:42 IST

ತಿರುವನಂತಪುರಂ,ಆ. 27: ಕ್ರಿಮಿನಲ್ ಹಿನ್ನೆಲೆಯ ದೇವಮಾನವರ ಆಸ್ತಿ ವಿವರಗಳು, ಆಶ್ರಮದ ಚಟುವಟಿಕೆಗಳ ಬಗ್ಗೆ ಸೂಕ್ಷ್ಮ ನಿಗಾ ಇರಿಸಬೇಕಾಗಿದೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಆಗ್ರಹಿಸಿದ್ದಾರೆ. ಇಂತಹವರ ಅಪರಿಮಿತ ಬೆಳವಣಿಗೆಗೆ ರಾಜಕೀಯ ಬೆಂಬಲ ಸಿಗುತ್ತಿರುವುದು ವಿಷಾದಕರ ಎಂದು ಅವರು ಹೇಳಿಕೆ ನೀಡಿದ್ದಾರೆ.

 ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ಗುರ್ಮೀತ್ ಸಿಂಗ್ ಎನ್ನುವ ಕ್ರಿಮಿನಲ್ ದೇವಮಾನವ ಸ್ವಂತ ಸುರಕ್ಷಾ ಸೇನೆಯನ್ನು ಇಟ್ಟುಕೊಂಡು, ಭೂಗತ ಜಗತ್ತಿನ ಚಟುವಟಿಕೆಗಳ ಮೂಲಕ ಭಾರತದ ಕಾನೂನು ವ್ಯವಸ್ಥೆಗೆ ಸವಾಲು ಹಾಕಿದ್ದಾನೆ. ಬೀದಿಯಲ್ಲಿ ದಾಂಧಲೆಯನ್ನು ಸೃಷ್ಟಿಸಿದ್ದಾರೆ. ಹೀಗಿರುವಾಗಲೂ ಭಾರತದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಅಸಹಾಯಕರಾಗಿರುವುದು ಭಾರತದ ಪ್ರಜಾಪ್ರಭುತ್ವದ ದುರಂತ ಎಂದು ಅವರು ವಿಷಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News