×
Ad

ಅಕ್ರಮ ಆಸ್ತಿ ಪ್ರಕರಣ: ಹಿ.ಪ್ರದೇಶ ಸಿಎಂಗೆ ದಾಖಲೆ ಹಸ್ತಾಂತರಿಸಲು ಸಿಬಿಐಗೆ ನಿರ್ದೇಶ

Update: 2017-08-30 21:26 IST

ಹೊಸದಿಲ್ಲಿ, ಆ.30: ಸುಮಾರು 10 ಕೋಟಿ ರೂ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಹಿಮಾಚಲಪ್ರದೇಶ ಮುಖ್ಯಮಂತ್ರಿ ವೀರ್‌ಭದ್ರ ಸಿಂಗ್ ಹಾಗೂ ಇತರರಿಗೆ ಹಸ್ತಾಂತರಿಸುವಂತೆ ವಿಶೇಷ ನ್ಯಾಯಾಲಯವೊಂದು ಸಿಬಿಐಗೆ ನಿರ್ದೇಶನ ನೀಡಿದೆ.

 ಆರೋಪಪಟ್ಟಿಯ ಜೊತೆ ತಮಗೆ ಹಲವು ದಾಖಲೆಪತ್ರಗಳನ್ನು ನೀಡಲಾಗಿಲ್ಲ ಎಂದು ಸಿಂಗ್, ಅವರ ಪತ್ನಿ ಪ್ರತಿಭಾ ಸಿಂಗ್ ಹಾಗೂ ಇತರರು ಈ ಮೊದಲು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ ವಿಚಾರಣೆಯ ವೇಳೆ ಖುದ್ದು ಹಾಜರಾತಿಯಿಂದ ತಮಗೆ ವಿನಾಯತಿ ನೀಡಬೇಕೆಂಬ ಸಿಂಗ್ ದಂಪತಿಯ ಮನವಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಸಿಬಿಐಗೆ ತಿಳಿಸಿ, ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ಮುಂದೂಡಿತು.

ಸಿಂಗ್ ದಂಪತಿಯ ಹೊರತಾಗಿ ಪ್ರಕರಣದಲ್ಲಿ ಆರೋಪಿಗಳಾಗಿರುವ ಉದ್ಯಮಿ ಚುನ್ನೀಲಾಲ್ ಚೌಹಾಣ್, ಠಸ್ಸೆ ಕಾಗದ ವ್ಯಾಪಾರಿ ಜೋಗಿಂದರ್ ಸಿಂಗ್ ಘಾಲ್ತ, ತರಾನಿ ಇನ್‌ಫ್ರಸ್ಟಕ್ಟರ್ ಸಂಸ್ಥೆಯ ಆಡಳಿತ ನಿರ್ದೇಶಕ ವಿ.ಚಂದ್ರಶೇಖರ್, ಲವನ್ ಕುಮಾರ್, ಪ್ರೇಮ್‌ರಾಜ್ ಹಾಗೂ ರಾಮ್‌ಪ್ರಕಾಶ್ ಭಾಟಿಯ ವಿಚಾರಣೆ ಸಂದರ್ಭ ಹಾಜರಿದ್ದರು. ಇವರೆಲ್ಲರಿಗೆ ಮೇ 29ರಂದು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ಪ್ರಕರಣದ ಮತ್ತೋರ್ವ ಆರೋಪಿ ಎಲ್‌ಐಸಿ ಏಜೆಂಟ್ ಆನಂದ್ ಚೌಹಾಣ್‌ನನ್ನು ಹಣ ಚಲುವೆ ಪ್ರಕರಣದಲ್ಲಿ ಬಂಧಿಸಲಾಗಿದ್ದು ಈಗ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News