×
Ad

“ದಿಲೀಪಣ್ಣಾ ನಾನು ಸಿಕ್ಕಿ ಬಿದ್ದೆ” ಎಂದು ವಾಯ್ಸ್ ಮೆಸೇಜ್ ಕಳುಹಿಸಿದ್ದ ಪಲ್ಸರ್ ಸುನಿ

Update: 2017-08-31 22:59 IST

ಕೊಚ್ಚಿ, ಆ. 31: “ದಿಲೀಪಣ್ಣಾ ನಾನು ಪೊಲೀಸರ ಕೈಗೆ ಸಿಕ್ಕಿ ಬಿದ್ದೆ” ಎಂದು ಪಲ್ಸರ್ ಸುನಿ ನಟ ದಿಲೀಪ್‌ಗೆ ಮೊಬೈಲ್ ಫೋನ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದ ಎಂದು ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ ರಹಸ್ಯ ದಾಖಲೆಗಳಲ್ಲಿ ಹೇಳಿದೆ.

 ಬಂಧನವಾದ ಕೂಡಲೇ ಪ್ರಕರಣದ ಪ್ರಧಾನ ಆರೋಪಿ ಪಲ್ಸರ್ ಸುನಿ ದಿಲೀಪ್‌ನನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದರು. ಸುನಿ ಮೊಬೈಲ್ ಮೂಲಕ ವಾಯ್ಸ್ ಮೆಸೇಜ್ ಅನ್ನು ದಿಲೀಪ್‌ಗೆ ಕಳುಹಿಸಿದ್ದ ಎಂಬ ನಿರ್ಣಾಯಕ ಪುರಾವೆಯನ್ನು ತನಿಖಾ ತಂಡ ಹೊಂದಿದೆ ಎಂದು ವರದಿ ಹೇಳಿದೆ.

 ಪಲ್ಸರ್ ಸುನಿ ಪೊಲೀಸ್ ಸಿಬ್ಬಂದಿಯ ಮೊಬೈಲ್‌ನಿಂದ “ದಿಲೀಪಣ್ಣಾ ನಾನು ಸಿಕ್ಕಿ ಬಿದ್ದೆ” ಎಂದು ವಾಯ್ಸ್ ಮೆಸೇಜ್ ಕಳುಹಿಸಿದ್ದ. ಈ ಸಂದೇಶದ ತಾಂತ್ರಿಕ ವಿವರಗಳನ್ನು ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದೆ. ಸಂದೇಶ ಕಳುಹಿಸಲು ಪಲ್ಸರ್ ಸುನಿಗೆ ಮೊಬೈಲ್ ನೀಡಿರುವ ತಪ್ಪನ್ನು ಕ್ಷಮಿಸುವಂತೆ ಕೋರಿ ಪೊಲೀಸ್ ಸಿಬ್ಬಂದಿ ಮನವಿ ಸಲ್ಲಿಸಿದ್ದಾರೆ. ಈ ಮನವಿ ಕೂಡ ನಟಿಗೆ ಲೈಂಗಿಕ ಕಿರುಕುಳ ನೀಡಿ ಪ್ರಕರಣದ ಸಾಕ್ಷಿಯಾಗಲಿದೆ.

ನಾನು ಸಂಚಿನ ಬಲಿಪಶು: ದಿಲೀಪ್

ಈ ನಡುವೆ ದಿಲೀಪ್, ನಾನು ಶತ್ರುಗಳು ರೂಪಿಸಿದ ಸಂಚಿನ ಬಲಿಪಶು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News