×
Ad

ಮುಂಬೈ ಬೌಲರ್ ಶಾರ್ದೂಲ್ ವಿರುದ್ಧ ಸಚಿನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದೇಕೆ ಗೊತ್ತೇ?

Update: 2017-09-01 19:59 IST

ಹೊಸದಿಲ್ಲಿ, ಸೆ.1: ಮುಂಬೈನ ವೇಗಿ ಶಾರ್ದೂಲ್ ಠಾಕೂರ್ ಗುರುವಾರ ಕೊನೆಗೂ ಟೀಮ್ ಇಂಡಿಯಾದಲ್ಲಿ ಆಡುವ 11ರ ಬಳಗವನ್ನು ಸೇರಿಕೊಂಡಿದ್ದರು. ಅವರಿಗೆ 10 ಸಂಖ್ಯೆ ಜೆರ್ಸಿಯನ್ನು ನೀಡಲಾಗಿತ್ತು. ಇದು ಸಚಿನ್ ತೆಂಡುಲ್ಕರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿನ್ ತೆಂಡುಲ್ಕರ್ ದೀರ್ಘ ಸಮಯ ಧರಿಸಿ ಆಡಿದ್ದ 10 ಸಂಖ್ಯೆಯ ಜೆರ್ಸಿಯನ್ನು ಶಾರ್ದೂಲ್‌ಗೆ ಕೊಟ್ಟಿದ್ದೇಕೆ ಎಂದು ಸಚಿನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾರಂಭಿಸಿದ್ದಾರೆ. ನಂ.10 ಜೆರ್ಸಿ ಸಚಿನ್‌ಗೆ ಸೇರಿದ್ದು. ಸಚಿನ್ ನಿವೃತ್ತಿಯ ಬಳಿಕ ಅವರ ಗೌರವಾರ್ಥ ನಂ.10 ಜೆರ್ಸಿಯನ್ನು ಬಿಸಿಸಿಐ ತನ್ನ ಬಳಿಯೇ ಉಳಿಸಿಕೊಳ್ಳಬೇಕಾಗಿತ್ತು ಎಂದು ಅಭಿಮಾನಿಗಳು ಹೇಳಿದ್ದಾರೆ.

ಶಾರ್ದೂಲ್ ಅವರೇ 10 ಸಂಖ್ಯೆ ಜೆರ್ಸಿಯನ್ನು ತ್ಯಜಿಸಿ ಎಂದು ವಿನಂತಿಸಿಕೊಂಡಿದ್ದಾರೆ.

ಶಾರ್ದೂಲ್ ತನ್ನ ಮೊದಲ ಪಂದ್ಯದಲ್ಲಿ 7 ಓವರ್‌ಗಳಲ್ಲಿ ಕೇವಲ 26 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News