×
Ad

ಸಾನಿಯಾ-ಬೋಪಣ್ಣಗೆ ಜಯ

Update: 2017-09-03 23:49 IST

ನ್ಯೂಯಾರ್ಕ್, ಸೆ.3: ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಯುಎಸ್ ಓಪನ್‌ನಲ್ಲಿ ಕ್ರಮವಾಗಿ ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

4ನೆ ಶ್ರೇಯಾಂಕದ ಸಾನಿಯಾ ಹಾಗೂ ಚೀನಾದ ಜೊತೆಗಾರ್ತಿ ಶುಯಿ ಪೆಂಗ್ ಜೊತೆಗೂಡಿ 2 ಗಂಟೆ, 13 ನಿಮಿಷಗಳ ಕಾಲ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಲೋವಾಕಿಯದ ಜಾನ್ ಸೆಪೆಲೊವಾ ಹಾಗೂ ಮಗ್ಡೆಲೆನಾ ರಿಬಾರಿಕೊವಾರನ್ನು 6-7(5), 6-3, 6-3 ಸೆಟ್‌ಗಳಿಂದ ಸೋಲಿಸುವುದರೊಂದಿಗೆ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮೂರನೆ ಸುತ್ತಿಗೆ ತೇರ್ಗಡೆಯಾದರು.

ಸಾನಿಯಾ-ಪೆಂಗ್ ಜೋಡಿ ಮುಂದಿನ ಸುತ್ತಿನಲ್ಲಿ ರೊಮಾನಿಯ-ಸ್ಪೇನ್ ಜೋಡಿ ಸೊರಾನಾ ಸಿರ್ಸ್ಟಿ ಹಾಗೂ ಸಾರಾ ಸೊರಿಬೆಸ್‌ರನ್ನು ಎದುರಿಸಲಿದೆೆ.

 ಇದೇ ವೇಳೆ, ಫ್ರೆಂಚ್ ಓಪನ್ ಚಾಂಪಿಯನ್ ಬೋಪಣ್ಣ ಹಾಗೂ ಕೆನಡಾದ ಗ್ಯಾಬ್ರಿಯೆಲಾ ಡಾಬ್ರೊಸ್ಕ್ಕಿ ಯುಎಸ್ ಓಪನ್‌ನ ಮೊದಲ ಸುತ್ತಿನ ಮಿಶ್ರ ಡಬಲ್ಸ್ ನಲ್ಲಿ ಬ್ರಿಟನ್-ಫಿನ್‌ಲ್ಯಾಂಡ್ ಜೋಡಿ ಹೀದರ್ ವ್ಯಾಟ್ಸನ್ ಹಾಗೂ ಹೆನ್ರಿ ಕಾಂಟಿನೆನ್‌ರನ್ನು 6-4, 4-6, 13-11 ಸೆಟ್‌ಗಳಿಂದ ಮಣಿಸಿದರು.

ಈ ಗೆಲುವಿನ ಮೂಲಕ ಬೋಪಣ್ಣ-ಡಾಬ್ರೊಸ್ಕಿ ಜೋಡಿ ವ್ಯಾಟ್ಸನ್-ಕಾಂಟಿನೆನ್ ವಿರುದ್ಧ ವಿಂಬಲ್ಡನ್ ಸೋಲಿಗೆ ಸೇಡು ತೀರಿಸಿಕೊಂಡಿತು. ಬೋಪಣ್ಣ-ಡಾಬ್ರೊಸ್ಕಿ 2ನೆ ಸುತ್ತಿನಲ್ಲಿ ಅಮೆರಿಕ-ಸ್ಪೇನ್ ಜೋಡಿ ನಿಕೊಲಸ್ ಮೊನ್ರೊ ಹಾಗೂ ಮರಿಯಾ ಜೊಸ್ ಮಾರ್ಟಿನೆಝ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News