ಸಂವಿಧಾನಾತ್ಮಕ ಪರೀಕ್ಷೆಯಲ್ಲಿ ಆಧಾರ್ ಗೆಲ್ಲುವ ಸಾಧ್ಯತೆ: ಜೇಟ್ಲಿ

Update: 2017-09-13 16:02 GMT

ಹೊಸದಿಲ್ಲಿ,ಸೆ.13: ದತ್ತಾಂಶಗಳ ರಕ್ಷಣೆಗಾಗಿ ಆಧಾರ್ ಕಾಯ್ದೆಯು ಸಾಕಷ್ಟು ಸುರಕ್ಷಾ ಕ್ರಮಗಳನ್ನೊಳಗೊಂಡಿದೆ ಎಂದು ಇಲ್ಲಿ ಹೇಳಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು ಸಂವಿಧಾನಾತ್ಮಕ ಪರೀಕ್ಷೆಯಲ್ಲಿ ಈ ಕಾಯ್ದೆಯು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

 ಆಧಾರ್ ಅನ್ನು ಸರಕಾರಿ ಯೋಜನೆಗಳಿಗೆ ಕಡ್ಡಾಯಗೊಳಿಸಿರುವುದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿರುವ ಮಧ್ಯೆಯೇ ಬುಧವಾರ ವಿಶ್ವಸಂಸ್ಥೆಯು ಏರ್ಪಡಿಸಿದ್ದ ಆರ್ಥಿಕ ಸೇರ್ಪಡೆ ಕುರಿತ ಸಮಾವೇಶದಲ್ಲಿ ಜೇಟ್ಲಿಯವರ ಈ ಹೇಳಿಕೆ ಹೊರಬಿದ್ದಿದೆ. ಪ್ರಕರಣದ ಮುಂದಿನ ವಿಚಾರಣೆ ನವಂಬರ್‌ನಲ್ಲಿ ನಡೆಯಲಿದೆ.

ಹಿಂದಿನ ಯುಪಿಎ ಆಡಳಿತದಲ್ಲಿ ಆಧಾರ್ ಆಗ ತಾನೇ ಮೂಡಿದ್ದ ಪರಿಕಲ್ಪನೆಯಾ ಗಿತ್ತು ಮತ್ತು ಅದಕ್ಕೆ ಕಾನೂನಿನ ಬೆಂಬಲವಿರಲಿಲ್ಲ. ಬಿಜೆಪಿ ಸರಕಾರವು ಅದಕ್ಕೆ ಕಾಯ್ದೆಯ ರೂಪವನ್ನು ನೀಡಿದೆ ಮತ್ತು ದತ್ತಾಂಶಗಳು ಮತ್ತು ಖಾಸಗಿತನ ರಕ್ಷಣೆಗೆ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ ಎಂದು ಜೇಟ್ಲಿ ತಿಳಿಸಿದರು.

ಇತ್ತೀಚಿಗೆ ಖಾಸಗಿತನ ಹಕ್ಕನ್ನು ಸಂವಿಧಾನಬದ್ಧ ಎಂದು ಎತ್ತಿ ಹಿಡಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಕಾರಣ ನಿರ್ಬಂಧಗಳ ಬಗ್ಗೆ ಪ್ರಸ್ತಾಪಿಸಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News