ಬ್ಯಾಂಕ್ ಖಾತೆಗಳ ದೃಢೀಕರಣಕ್ಕೆ ಎನ್‌ಜಿಒಗಳಿಗೆ ಕೇಂದ್ರದ ನಿರ್ದೇಶ

Update: 2017-09-13 16:08 GMT

ಹೊಸದಿಲ್ಲಿ,ಸೆ.13: ತಾವು ವಿದೇಶಿ ದೇಣಿಗೆಗಳನ್ನು ಸ್ವೀಕರಿಸುತ್ತಿರುವ ಬ್ಯಾಂಕ್ ಖಾತೆಗಳನ್ನು ದೃಢಪಡಿಸುವಂತೆ ದೇಶಾದ್ಯಂತ 1,222 ಎನ್‌ಜಿಒಗಳಿಗೆ ನಿರ್ದೇಶ ನೀಡಿರುವ ಕೇಂದ್ರ ಗೃಹ ಸಚಿವಾಲಯವು, ಇದಕ್ಕೆ ತಪ್ಪಿದರೆ ದಂಡನಾತ್ಮಕ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ಎನ್‌ಜಿಒಗಳ ಪಟ್ಟಿಯಲ್ಲಿ ಶ್ರೀ ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್, ಇಂದೋರ ಕ್ಯಾನ್ಸರ್ ಪ್ರತಿಷ್ಠಾನ ದತ್ತಿ ಸಂಸ್ಥೆ, ಕೊಯಮತ್ತೂರು ಕ್ರಿಶ್ಚಿಯನ್ ದತ್ತಿ ಸಂಸ್ಥೆ, ಮದನಿ ದಾರುತ್ ತರ್ಬಿಯತ್ ಇತ್ಯಾದಿಗಳು ಸೇರಿವೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಫೆರಾ)ಯಡಿ ಎನ್‌ಜಿಒಗಳು ಒಂದೇ ನಿಯೋಜಿತ ಬ್ಯಾಂಕ್ ಖಾತೆಯ ಮೂಲಕ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಬೇಕು ಎಂದು ಸಚಿವಾಲಯವು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಆದರೆ ಹಲವಾರು ಎನ್‌ಜಿಒಗಳು ತಮ್ಮ ವಿದೇಶಿ ದೇಣಿಗೆ ನಿಯೋಜಿತ ಬ್ಯಾಂಕ್ ಖಾತೆಗಳನ್ನು ಪ್ರಮಾಣೀಕರಿಸಿಲ್ಲ ಮತ್ತು ಇದರಿಂದಾಗಿ ಫೆರಾ ನಿಯಮಗಳನ್ನು ಪಾಲಿಸುವುದು ಬ್ಯಾಂಕ್‌ಗಳಿಗೆ ಸಮಸ್ಯೆಯಾಗಿದೆ ಎಂದೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News