ನಾನು ಯಾಕೆ ಮೋದಿಯವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿಲ್ಲವೆಂದರೆ...

Update: 2017-09-18 18:06 GMT

► ಮೋದಿಯವರು ತಮ್ಮ ಮೂರೂವರೆ ವರ್ಷಗಳ ಆಡಳಿತದ ಅವಧಿಯಲ್ಲಿ ಒಮ್ಮೆಯೂ ತಾವೊಬ್ಬ ದೇಶದ ಪ್ರಧಾನಿಯಂತೆ ವರ್ತಿಸಲೇ ಇಲ್ಲ...

► ಮೋದಿಯವರು ತಮ್ಮ ಮೂರೂವರೆ ವರ್ಷಗಳ ಅವಧಿಯಲ್ಲಿ ಈ ದೇಶದ ಬಹುತ್ವ ಮತ್ತು ಧಾರ್ಮಿಕ ಸಾಮರಸ್ಯವನ್ನರಿತು ನಡೆಯಲೇ ಇಲ್ಲ...

► ಮೋದಿಯವರು ತಮ್ಮ ಮೂರೂವರೆ ವರ್ಷಗಳ ಅವಧಿಯಲ್ಲಿ 70 ವರ್ಷಗಳಿಂದ ಪ್ರತಿಯೋರ್ವ ಭಾರತೀಯನ ಶ್ರಮವಾಗಿದ್ದ ಆರ್ಥಿಕ ಸದೃಢತೆಯನ್ನು ಹಾಳುಗೆಡವಿ ಬಡವರ ಸ್ವಾಭಿಮಾನವನ್ನು ಕಿತ್ತುಕೊಂಡದ್ದಕ್ಕೆ...

► ಮೋದಿಯವರು ತಮ್ಮ ಮೂರೂವರೆ ವರ್ಷಗಳ ಅವಧಿಯಲ್ಲಿ ತಾವೇ ನೀಡಿದ ಚುನಾವಣಾ ಪೂರ್ವ ಪ್ರಣಾಳಿಕೆಯ ಶೇ.10 ಪ್ರಮಾಣಗಳನ್ನು ಈಡೇರಿಸಿಲ್ಲದ್ದಕ್ಕೆ...

► ಏಕ ಮುಖ ನಿರ್ಧಾರ ತೆಗೆದುಕೊಂಡು ನೋಟ್ ಬ್ಯಾನ್ ಮಾಡಿದ್ದಕ್ಕೆ.

► ನೋಟ್ ಬ್ಯಾನ್ ಮೂಲಕ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಗೆ ಕೊಡಲಿ ಪೆಟ್ಟು ಕೊಟ್ಟದ್ದಕ್ಕೆ.

► ಉತ್ತರ ಪ್ರದೇಶ ಚುನಾವಣೆ ಗೆಲ್ಲುವ ಕ್ಷುಲ್ಲಕ ಕಾರಣಕ್ಕೆ ನೋಟ್ ಬ್ಯಾನ್ ಮಾಡಿದ್ದಕ್ಕೆ.

► ನೋಟ್ ಬ್ಯಾನ್ ಹೆಡ್ಡತನದ ನಿರ್ಧಾರವೆಂದು ತಿಳಿದರೂ ದೇಶದ ಜನತೆಯ ಕ್ಷಮೆ ಕೇಳದ್ದಕ್ಕೆ.

► ವಿದೇಶದ ನೆಲದಲ್ಲಿ ನಿಂತು ಭಾರತವನ್ನು ಅವಮಾನ ಮಾಡಿದ್ದಕ್ಕೆ.

► ಗೋರಕ್ಷಕರಿಗೆ ಲೈಸೆನ್ಸ್ ಕೊಟ್ಟು ಸಿಕ್ಕಸಿಕ್ಕವರನ್ನು ಕೊಚ್ಚಿಸಿದ್ದಕ್ಕೆ.

► ಕಾಂಗ್ರೆಸ್ ಯೋಜನೆೆಗಳನ್ನು ಮರುನಾಮಕರಣ ಮಾಡಿ ತಮ್ಮ ಯೋಜನೆಗಳೆಂದು ಸುಳ್ಳು ಹೇಳಿದ್ದಕ್ಕೆ.

► ಕೆಂಪುಕೋಟೆಯ ಮೇಲೆ ನಿಂತು ಸುಳ್ಳು ಹೇಳಿ ನಮ್ಮನ್ನೆಲ್ಲ ವಂಚಿಸಿದ್ದಕ್ಕೆ.

► ಗೋರಖ್‌ಪುರದಲ್ಲಿ ನೂರಾರು ಮಕ್ಕಳು ಸತ್ತರೂ ಒಂದೇ ಒಂದು ಸಮಾಧಾನದ ಮಾತು ಆಡದ್ದಕ್ಕೆ. ಮತ್ತು ಮುಖ್ಯಮಂತ್ರಿಗೆ ಬುದ್ಧ್ದಿ ಹೇಳದಿದ್ದುದ್ದಕ್ಕೆ.

► ಅತ್ಯಧಿಕ ಸೈನಿಕರ ಕೊಲೆಗಳಾದರೂ ಯಾವುದೇ ಸೈನಿಕನ ಕುಟುಂಬಕ್ಕೆ ಸಾಂತ್ವನ ಹೇಳದ್ದಕ್ಕೆ.

► ಸಾಮಾಜಿಕ ಜಾಲತಾಣದಲ್ಲಿ ವಿಕೃತವಾಗಿ ಮಾತಾಡುವ ಭಕ್ತ ಸಮೂಹವನ್ನು ಪೋಷಿಸುತ್ತಿರುವುದಕ್ಕೆ.

► ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ಗೌರಿಯವರ ಹತ್ಯೆಯನ್ನು ಖಂಡಿಸದೆ ಇದ್ದುದಕ್ಕೆ.

► ತನ್ನದೇ ಮಂತ್ರಿಮಂಡಲದಲ್ಲಿ ಸರ್ವಾಧಿಕಾರಿಯಂತೆ ನಿಂತು ಸಂವಿಧಾನವನ್ನು ಗಾಳಿಗೆ ತೂರುತ್ತಿರುವುದಕ್ಕೆ.

► ಕಾವೇರಿ, ಮಹಾದಾಯಿ ವಿಷಯದಲ್ಲಿ ಇಬ್ಬಂದಿ ನೀತಿ ತೋರುತ್ತಿರುವುದಕ್ಕೆ.

► ಮುಖ್ಯವಾಗಿ ನಮ್ಮ 15ಲಕ್ಷ ಬರಲಿಲ್ಲ. ಕಪ್ಪುಹಣಕ್ಕೆ ಕಡಿವಾಣ ಬೀಳಲಿಲ್ಲ, ಭ್ರಷ್ಟಾಚಾರ ಹೆಚ್ಚಾಯಿತು, ನಿರುದ್ಯೋಗ ಆಗಸಕ್ಕೆ ಮುಟ್ಟಿತು.

ಕೂಲಿಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ, ಸಣ್ಣ ಕೈಗಾರಿಕೆ ಕದ ಮುಚ್ಚಿದವು, ಮಧ್ಯಮ ವರ್ಗದ ಕೈಗಾರಿಕೆ ದಿಕ್ಕಾಪಾಲಾದವು, ಶಿಕ್ಷಣ ಗುಣಮಟ್ಟ ಹಾಳಾಗುತ್ತಿದೆ, ಆರೋಗ್ಯ ವ್ಯವಸ್ಥೆ ಕಂಗಾಲಾಗುತ್ತಿದೆ, ಪೆಟ್ರೋಲ್, ಡೀಸೆಲ್ ಬೆಲೆ ಆಗಸಕ್ಕೆ, ಇಳಿಮುಖವಾದ ರಫ್ತು, ಕುಗ್ಗಿ ತಗ್ಗಿ ಬೆಂಡಾದ ಉತ್ಪಾದನೆ ಕ್ಷೇತ್ರ, ಕುಸಿದ ರೂಪಾಯಿ ಮೌಲ್ಯ, ಇಳಿಯುತ್ತಲೇ ಇರುವ ಷೇರು ಮಾರುಕಟ್ಟೆ, ತಲೆಗೆ ಬಂದದ್ದೇ ರೂಲ್, ಮನಸ್ಸಿಗೆ ಬಂದದ್ದೇ ಆಚರಣೆ. ಹೊಸತನದ ಅಳವಡಿಕೆ ಎಲ್ಲಿಯೂ ಇಲ್ಲ.

► ಇರುವ ರೈಲುಗಳು ಹಳಿಯ ಮೇಲೆ ನಿಲ್ಲುತ್ತಿಲ್ಲ. ಆದರೆ ಬುಲೆಟ್ ಟ್ರೈನ್ ಮೂಲಕ ಹುಚ್ಚೆಬ್ಬಿಸುತ್ತಿದ್ದಾರೆ.

ಎಲ್ಲದಕ್ಕೂ ಮುಖ್ಯವಾಗಿ ಇಷ್ಟೆಲ್ಲಾ ಅವಾಂತರಗಳಾಗುತ್ತಿದ್ದರೂ ಒಮ್ಮೆಯೂ ಇದನ್ನು ಮೋದಿಯವರು ಒಪ್ಪಿಕೊಳ್ಳಲೇ ಇಲ್ಲ. ದೇಶದ ಜನತೆಗೆ ಅಭಯ ನೀಡಲೇ ಇಲ್ಲ.

ಇಷ್ಟೆಲ್ಲಾ ಅವಾಂತರ ಮಾಡಿ ನನ್ನ ದೇಶವನ್ನು ಅಧೋಗತಿಗೆ ಒಯ್ಯುತ್ತಿರುವ ಮೋದಿಗೆ ನಾನು ಶುಭಾಶಯ ಹೇಳಬೇಕೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News