ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆ: ಎಎಸ್‍ಜೆಗೆ ಪ್ರಚಂಡ ಗೆಲುವು

Update: 2017-09-23 08:13 GMT

ಹೈದರಾಬಾದ್,ಸೆ. 23: ಹೈದರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯ(ಎಚ್‍ಸಿಯು) ವಿದ್ಯಾರ್ಥಿಯೂನಿಯನ್ ಚುನಾವಣೆಯಲಿ ದಲಿತ್-ಅಲ್ಪಸಂಖ್ಯಾತ-ಎಡಪಕ್ಷ ವಿದ್ಯಾರ್ಥಿಗಳ ಮೈತ್ರಿ ಸಂಘಟನೆಯಾದ ಅಲಯನ್ಸ್ ಫಾರ್ ಸೋಶಿಯಲ್ ಜಸ್ಟಿಸ್ (ಎಎಸ್‍ಜೆ) ಪ್ರಮುಖವಾದ ಎಲ್ಲ ಸೀಟುಗಳಲ್ಲಿ ವಿಜಯಗಳಿಸಿದೆ.  ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಕ್ರೀಡಾ ಕಾರ್ಯದರ್ಶಿ, ಸಾಂಸ್ಕøತಿಕ ಕಾರ್ಯದರ್ಶಿ ಹೀಗೆ ಎಲ್ಲ ಮುಖ್ಯ ಪ್ಯಾನಲ್‍ಗಳಲ್ಲಿ  ಎಎಸ್‍ಜೆ  ಗೆದ್ದಿದೆ.

ಮುಖ್ಯ ಪ್ರತಿಸ್ಪರ್ಧಿಯಾದ ಎಬಿವಿಪಿಗೆ ತೀರಾ ಹಿನ್ನಡೆಯಾಗಿದೆ. ಎಎಸ್‍ಜೆಯ ಕೇರಳ ಮೂಲದ  ಪಿಎಚ್‍ಡಿ ವಿದ್ಯಾರ್ಥಿ ಶ್ರೀರಾಗ್ ಪೊಯ್‍ಕಡನ್ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾರೆ. ಎಬಿವಿಪಿ ಅಭ್ಯರ್ಥಿ ಕೆ. ಪಲ್ಸಾನಿಯರನ್ನು  160 ಮತಗಳಿಗೆ ಎಎಸ್‍ಐ(ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್) ಪ್ರತಿನಿಧಿ ಶ್ರೀರಾಗ್ ಸೋಲಿಸಿದರು. ಎನ್ ಎಸ್‍ಯುಐ ವಿದ್ಯಾರ್ಥಿ ಮೂರನೆ ಸ್ಥಾನಕ್ಕೆ ಗಳಿಸಿದ್ದರು. ಲೋನಾವತ್ ನರೇಶ್ ಉಪಾಧ್ಯಕ್ಷರು, ಆರಿಫ್ ಅಹ್ಮದ್ ಪ್ರಧಾನ ಕಾರ್ಯದರ್ಶಿ, ಮುಹಮ್ಮದ್ ಆಶಿಕ್ ಜಂಟಿ ಕಾರ್ಯದರ್ಶಿ, ಲೋಲಂ ಶ್ರಾವಣ್ ಕುಮರ್‍ಕ್ರೀಡಾ ಕಾರ್ಯದರ್ಶಿ, ಅಭಿಶೇಕ್ ಸಾಂಸ್ಕøತಿಕ ಕಾರ್ಯದರ್ಶಿಯಾಗಿ ವಿಜಯಗಳಿಸಿದ್ದಾರೆ.

ಎಸ್‍ಎಫ್‍ಐ, ದಲಿತ್ ಸ್ಟೂಡೆಂಟ್ಸ್ ಯೂನಿಯನ್(ಡಿಎಸ್‍ಯು), ಟ್ರೈಬಲ್ ಸ್ಟೂಡೆಂಟ್ಸ್ ಫಾರಂ(ಟಿಎಸ್‍ಎಫ್,  ತೆಲಂಗಾಣ ವಿದ್ಯಾರ್ಥಿ ವೇದಿಕ(ಟಿವಿವಿ), ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್(ಎಂಎಸೆಫ್), ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್(ಎಸ್‍ಐಒ) ಎಎಸ್‍ಜೆಯಲ್ಲಿರುವ ಸಂಘಟನೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News