×
Ad

ಬಿಎಚ್‌ಯು ಹಿಂಸಾಚಾರ ಪ್ರಕರಣ: ವಿವಿಯ ವಿದ್ಯಾರ್ಥಿ ಮೇಲ್ವಿಚಾರಕ ರಾಜೀನಾಮೆ

Update: 2017-09-27 18:52 IST

ವಾರಣಾಸಿ, ಸೆ.27: ಬನಾರಸ್ ಹಿಂದು ವಿಶ್ವವಿದ್ಯಾನಿಲಯ (ಬಿಎಚ್‌ಯು) ಆವರಣದಲ್ಲಿ ನಡೆದ ಹಿಂಸಾಚಾರ ಪ್ರಕರಣದ ನೈತಿಕ ಹೊಣೆಹೊತ್ತಿರುವ ವಿವಿಯ ಪ್ರಧಾನ ವಿದ್ಯಾರ್ಥಿ ಮೇಲ್ವಿಚಾರಕ ಪ್ರೊ ಒ.ಎನ್.ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮಂಗಳವಾರ ರಾತ್ರಿ ಸಿಂಗ್ ರಾಜೀನಾಮೆ ಪತ್ರವನ್ನು ಉಪಕುಲಪತಿ ಗಿರೀಶ್‌ಚಂದ್ರ ತ್ರಿಪಾಠಿಗೆ ಸಲ್ಲಿಸಿದ್ದು ಅದನ್ನು ತಕ್ಷಣ ಅಂಗೀಕರಿಸಲಾಗಿದೆ ಎಂದು ವಿವಿಯ ಮೂಲಗಳು ತಿಳಿಸಿವೆ.

 ಬಿಎಚ್‌ಯು ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆಗಿರುವ ಎಂ.ಕೆ.ಸಿಂಗ್ ಅವರನ್ನು ಪ್ರಭಾರ ವಿದ್ಯಾರ್ಥಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ . ಬಿಎಚ್‌ಯು ಆವರಣದಲ್ಲಿ ವಿದ್ಯಾರ್ಥಿನಿಯನ್ನು ಚುಡಾಯಿಸಿರುವ ಪ್ರಕರಣವನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಶನಿವಾರ ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇದರಿಂದ ಮಹಿಳೆ, ಪತ್ರಕರ್ತರು ಹಾಗೂ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News