ಡ್ರಗ್ಸ್ ಹಾವಳಿಗೆ ಕೊನೆ ಎಂದು?

Update: 2017-10-12 18:17 GMT

ಮಾನ್ಯರೆ,

ರಾಜ್ಯದಲ್ಲಿ ಡ್ರಗ್ಸ್ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಡ್ರಗ್ಸ್ ಸೇವನೆ ಎಲ್ಲೆಡೆ ವ್ಯಸನದ ರೂಪ ಪಡೆಯುತ್ತಿದ್ದು, ಹದಿಹರೆಯದ ಯುವಕರೇ ಡ್ರಗ್ಸ್ ಸೇವಿಸಿ ಅಮಲಿನ ನಶೆಯಲ್ಲಿ ತೇಲಾಡುತ್ತಿದ್ದಾರೆ. ಅದರಲ್ಲೂ ಬೆಂಗಳೂರು, ಮಂಗಳೂರಿನಂತಹ ನಗರಗಳ ವಿವಿಧ ಕಾಲೇಜುಗಳ ಆವರಣದಲ್ಲಿ ಕದ್ದು ಮುಚ್ಚಿ ಡ್ರಗ್ಸ್ ಮಾರಲಾಗುತ್ತಿದೆ. ಇಂತಹ ಸಮಾಜವಿರೋಧಿ ಕೃತ್ಯದಿಂದಾಗಿ ಕೆಲ ವಿದ್ಯಾರ್ಥಿಗಳು ಡ್ರಗ್ಸ್ ವ್ಯಸನಿಗಳಾಗುವುದರ ಜೊತೆಗೆ ಅಪರಾಧ ಕೃತ್ಯ ಎಸಗುತ್ತಿದ್ದಾರೆ.

ಕರಾವಳಿ ಭಾಗದಲ್ಲಿ ಇತ್ತೀಚೆಗೆ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ನಗರಗಳಲ್ಲಿ ಕಂಡು ಬಂದಿರುವ ಅಪರಾಧ ಕೃತ್ಯಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಡ್ರಗ್ಸ್ ವ್ಯಸನಿಗಳೇ ಇರುವುದು ಸಾಬೀತಾಗುತ್ತಿದೆ. ಇದು ಯುವಜನತೆಯ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ.

ಆದ್ದರಿಂದ ಕಾಲೇಜುಗಳಲ್ಲಿ ಡ್ರಗ್ಸ್ ಮಾರಾಟ ಹಾಗೂ ವ್ಯಸನಿಗಳ ಸಂಖ್ಯೆಯನ್ನು ಕೂಡಲೇ ನಿಯಂತ್ರಿಸಬೇಕಾಗಿದೆ. ಇಲ್ಲದಿದ್ದರೆ ಮತ್ತಷ್ಟು ಯುವಜನತೆ ಈ ಡ್ರಗ್ಸ್ ಚಟಕ್ಕೆ ಬಲಿಯಾಗಬಹುದು.

-ಶಂಶೀರ್ ಬುಡೋಳಿ, ಬಂಟ್ವಾಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News